ಬೆಂಗಳೂರು: ಸ್ಯಾಂಡಲ್‍ವುಡ್ ನಟರಿಗೆ ಒಂಡು ಕಡೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದ್ದು, ಮೊತ್ತೊಂದೆಡೆ ಅವರ ಐಷಾರಾಮಿ ಕಾರುಗಳಿಂದ ಕಾಟ ಶುರುವಾಗಿದೆ.
ಚಂದನವನದ ಸ್ಟಾರ್ ನಟರು ಕಳೆದ ಒಂದು ವರ್ಷದಿಂದ ಸಾಕಷ್ಟು ಬಾರಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದರು. ಈ ಹಿಂದೆ ನಟ ಯಶ್ ಪತ್ನಿ ರಾಧಿಕಾ ಮತ್ತು ಅಪ್ಪ-ಅಮ್ಮನಿಗೆ ಮೂರು ಭರ್ಜರಿ ಕಾರುಗಳನ್ನು ಗಿಫ್ಟ್ ಮಾಡಿದ್ದರು. ನಟ ಸುದೀಪ್ ಕೂಡ ಐಷಾರಾಮಿ ಕಾರು ಖರೀದಿ ಮಾಡಿದ್ದರು. ಈಗಾಗಲೇ ಸುದೀಪ್ ಬಳಿ ಆಡಿ, ರೇಂಜ್ ರೋವರ್, ಪೋರ್ಶೆ ಕಾರುಗಳು ಇವೆ.
ಪುನೀತ್ ರಾಜ್‍ಕುಮಾರ್ ಬಳಿ ಕೂಡ ರೇಂಜ್ ರೋವರ್ ಹಾಗೂ ಬೆಂಜ್ ಕಾರುಗಳಿವೆ. ಈ ಹಿನ್ನೆಲೆಯಲ್ಲಿ ಕಾರನ್ನು ಖರೀದಿ ಮಾಡುವಾಗ ಹಣವನ್ನು ಯಾವ ಮೂಲದಿಂದ ಸಂದಾಯ ಮಾಡಿದ್ದೀರಿ? ಮತ್ತು ವಿದೇಶ ಪ್ರವಾಸದ ಬಗ್ಗೆಯೂ ಮಾಹಿತಿಯನ್ನು ಅಧಿಕಾರಿಗಳು ಕೇಳುತ್ತಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ನಟರ ಮನೆಯಲ್ಲಿ ನಡೆಯುವಂತಹ ದೊಡ್ಡ ಕಾರ್ಯಕ್ರಮಗಳ ಕುರಿತು ದಾಖಲೆಗಳನ್ನು ಕೇಳುತ್ತಿದ್ದು, ಕಾರ್ ಮತ್ತು ಇತರೆ ರಶೀದಿಗಳ ಬಗ್ಗೆ ಮಾಹಿತಿ ಐಟಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv