ನವದೆಹಲಿ: ಐಟಿ ಸಂಸ್ಥೆ ಕಾಗ್ನಿಜೆಂಟ್ ತನ್ನ ಸುಮಾರು 6 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
2016ರ ಡಿಸೆಂಬರ್ 31ರ ವೇಳೆಗೆ ಕಾಗ್ನಿಜೆಂಟ್‍ನಲ್ಲಿ ಅಂದಾಜು 2.6 ಲಕ್ಷ ಉದ್ಯೋಗಿಗಳಿದ್ದರು. ಪ್ರತಿವರ್ಷದಂತೆ ಕಡಿಮೆ ಪ್ರದರ್ಶನ ನೀಡುವ ಉದ್ಯೋಗಿಗಳನ್ನು ಕಿತ್ತುಹಾಕಲಾಗ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಂಪೆನಿಯಲ್ಲಿ ಹಲವು ಉದ್ಯೋಗಿಗಳಿಗೆ ಸಂಬಳವನ್ನೂ ಕಡಿತಗೊಳಿಸಲಾಗಿದೆ.
Advertisement
ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಕಂಪೆನಿಯ ವಕ್ತಾರರು, ಉದ್ಯೋಗ ನಿರ್ವಹಣೆಯ ತಂತ್ರವಾಗಿ ನಾವು ಪ್ರತಿ ವರ್ಷ ಇದನ್ನು ಮಾಡುತ್ತೇವೆ. ಕಂಪೆನಿಯ ಗ್ರಾಹಕರ ಅಗತ್ಯತೆಗಳನ್ನ ಪೂರೈಸಲು ಹಾಗೂ ನಮ್ಮ ಗುರಿಯನ್ನ ಈಡೇರಿಸಲು ಸರಿಯಾದ ನೌಕರರು ನಮ್ಮ ಬಳಿ ಇದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ನಿಯಮಿತವಾಗಿ ಉದ್ಯೋಗಿಯ ಕೆಲಸವನ್ನ ಮೌಲ್ಯಮಾಪನ ಮಾಡುತ್ತೇವೆ. ಹೀಗಾಗಿ ಕಂಪೆನಿ ತೆಗೆದುಕೊಳ್ಳುವ ನಿರ್ಧಾರ ಉದ್ಯೋಗಿಯ ಕಾರ್ಯವೈಖರಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
Advertisement
ಅಲ್ಲದೆ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗಬಹುದು. ಇದೇ ವೇಳೆ ನಾವು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.