ವಿಜಯಪುರ: ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರದಿಂದ ಅನ್ಯಾಯವಾಗಿಲ್ಲ. ಆಗಲು ನಾವು ಬಿಡುವುದಿಲ್ಲ. ಸಮಗ್ರ ಕರ್ನಾಟಕ ಇರಬೇಕು ಎನ್ನುವುದು ಹಿರಿಯರ ಮತ್ತು ನನ್ನ ಆಶಯ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಪ್ರತ್ಯೇಕ ರಾಜ್ಯ ಹೋರಾಟದ ಕುರಿತು ಶಾಸಕ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಅನ್ಯಾಯ ಆಗಬಾರದು. ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ಶಾಸಕ ಶ್ರೀರಾಮುಲು ಅವರು ಮೊದಲು ಯಾವ ಪಕ್ಷದಿಂದ ಹೋರಾಟ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಬೇಕು. ಅವರಿಗೆ ಪಕ್ಷ ಬೆಂಬಲ ನೀಡುತ್ತಾ ಎಂಬುವುದನ್ನು ಖಚಿತ ಪಡಿಸಕೊಳ್ಳಬೇಕು. ಇಲ್ಲಿ ವೈಯಕ್ತಿಕ ಹೇಳಿಕೆಗೆ ಬೆಲೆ ಬರುವುದಿಲ್ಲ ಎಂದು ಟಾಂಗ್ ನೀಡಿದರು.
ನಮ್ಮ ಪಕ್ಷದಲ್ಲೇ ಈ ಹಿಂದೆ ಪ್ರತ್ಯೇಕ ರಾಜ್ಯದ ಬಗ್ಗೆ ಹಲವು ಹೇಳಿಕೆ ಕೇಳಿಬಂದಿತ್ತು. ಬಿಜೆಪಿ ಮತ್ತೊಬ್ಬ ಮುಖಂಡರದ ಉಮೇಶ್ ಕತ್ತಿ ಅವರು ಇದೇ ರೀತಿ ಹೇಳಿಕೆ ನೀಡಿದ್ದರು. ಆದರೆ ನಮ್ಮ ನಾಯಕರಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂಬ ನೋವು ಇದೆ. ಉತ್ತರ ಕರ್ನಾಟಕ ಹೆಚ್ಚು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಉತ್ತರ ಕರ್ನಾಟಕಕ್ಕೆ ಅಧಿಕ ಯೋಜನೆಗಳನ್ನು ತರುವ ಸಲುವಾಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಹೋರಾಟ ಮಾಡಬಾರದು ಎಂದು ಶ್ರೀರಾಮುಲುಗೆ ಸಲಹೆ ನೀಡಿದರು.
ಹೆಗ್ಡೆಗೆ ಯತ್ನಾಳ್ ಪೈಪೋಟಿ: ದೇಶದಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿ ಜೀವಿಗಳೇ ಅಪಾಯ ಎಂದು ಹೇಳಿದ್ದ ಬಸನಗೌಡ ಯತ್ನಾಳ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಂಬಿ ಪಾಟೀಲ್, ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದು ಎಂಡ್ ಲೇಸ್ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಅವರಿಗೆ ಯತ್ನಾಳ್ ಪೈಪೋಟಿ ನಡೆಸುತ್ತಿದ್ದಾರೆ ಅಷ್ಟೇ ಎಂದರು.