ಬೆಂಗಳೂರು: ನನ್ನ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ(MUDA) ನೀಡಿರುವ ಅರ್ಜಿಯಲ್ಲಿ ವೈಟ್ನರ್ ಬಳಕೆ ಮಾಡಿದ ಬಗ್ಗೆ ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಲೋಕಾಯುಕ್ತಕ್ಕೆ ತಿಳಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಲೋಕಾಯುಕ್ತ ಪೊಲೀಸರು (Lokayukta Police) ಕ್ಲೀನ್‌ಚಿಟ್ ನೀಡಿದ್ದಾರೆ. ಈಗ ಲೋಕಾಯುಕ್ತ ಪೊಲೀಸರ (Lokayukta Police) ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ, ಇತರರು ನೀಡಿದ್ದ ಉತ್ತರಗಳ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಈ ಮಧ್ಯೆ ತನಿಖೆಯ ಅಂತಿಮ ವರದಿಯ ಪ್ರತಿಯನ್ನು ದೂರುದಾರನಿಗೆ ಕೊಡಲು ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ ಏಳಕ್ಕೆ ಮುಂದೂಡಿದೆ.
Advertisement
Advertisement
ಸಿಎಂ ಹೇಳಿದ್ದೇನು?
1977 ರಲ್ಲಿ ವಿವಾಹಕ್ಕೂ ಮುನ್ನ ಮಲ್ಲಿಕಾರ್ಜುನಸ್ವಾಮಿ ಮತ್ತು ಅವರ ಕುಟಂಬದ ಪರಿಚಯವಿದೆ . ಮದುವೆ ನಂತರ ಮಲ್ಲಿಕಾರ್ಜುನ ಸ್ವಾಮಿ ಜೊತೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ, ಕೇವಲ ನನ್ನ ಬಾಮೈದ. ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನು ಖರೀದಿ ವಿಚಾರ ನನಗೆ ಗೊತ್ತಿಲ್ಲ. 2013 ರಲ್ಲಿ ನನ್ನ ಪತ್ನಿ, ನನಗೆ ಹಾಗೂ ನನ್ನ ಮಗನಿಗೆ ತಿಳಿಸಿದ್ದಾರೆ.
Advertisement
ಜಮೀನು ಖರೀದಿ ವೇಳೆ ಯಾವುದೇ ಹಣಕಾಸಿನ ಸಹಾಯ ಮಾಡಿರುವುದಿಲ್ಲ, ಅವರೂ ಸಹ ಕೇಳಿಲ್ಲ. ಜಮೀನಿನ ಮಾಲೀಕತ್ವ ಯಾರಿಗೆ ಯಾರ ಹೆಸರಿಗೆ ಬದಲಾಯಿತು ಎಂಬ ವಿಚಾರ ಸಹ ನನಗೆ ತಿಳಿದಿಲ್ಲ. ಮೂಲ ಜಮೀನು ಮಾಲೀಕರಾದ ದೇವರಾಜು ಪರಿಚಯವೂ ನನಗಿಲ್ಲ. ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ಉದ್ಧವ್, ರಾಜ್ ಠಾಕ್ರೆ? – ಆ ಫೋಟೋ ಮೂಡಿಸಿತು ಕುತೂಹಲ
1998ರಲ್ಲಿ ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿದ ಬಗ್ಗೆಯೂ ತಿಳಿದಿಲ್ಲ, ಸಹಾಯವನ್ನೂ ನಾನು ಮಾಡಿರುವುದಿಲ್ಲ. ಮಲ್ಲಿಕಾರ್ಜುನ ಸ್ವಾಮಿ ಜಮೀನು ಭೂ ಪರಿವರ್ತನೆ ಮಾಡುವ ಸಮಯದಲ್ಲಿ ನನ್ನನ್ನು ಭೇಟಿಯಾಗಿಲ್ಲ, ಯಾವುದೇ ಸಹಾಯವನ್ನೂ ಕೇಳಿಲ್ಲ. ಆ ಸಮಯದಲ್ಲಿ ಕುಮಾರ್ ನಾಯಕ್ ಜಿಲ್ಲಾಧಿಕಾರಿಯಾಗಿದ್ದರು. ನಾನು ಯಾವುದೇ ಅಧಿಕಾರಿಗಳಿಗೂ ಶಿಫಾರಸು ಮಾಡಿಲ್ಲ.
ನನ್ನ ಪತ್ನಿಗೆ ಜಮೀನು ದಾನವಾಗಿ ಬಂದ ವಿಚಾರವನ್ನು 2013 ರ ಮಧ್ಯಭಾಗದಲ್ಲಿ ತಿಳಿಸಿರುತ್ತಾರೆ. 2013 ರಲ್ಲಿ ನಾನು ಸಿಎಂ ಆಗಿದ್ದ ಸಮಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. 50:50 ಅನುಪಾತದಲ್ಲಿ ಪರಿಹಾರ ನೀಡುವ ವಿಚಾರ ನನಗೆ ತಿಳಿದಿಲ್ಲ. ಆ ಸಮಯದಲ್ಲಿ ಶಾಸಕರಾಗಿದ್ದವರು ಮುಡಾ ಸದಸ್ಯರಾಗಿರುತ್ತಾರೆ. ನನ್ನ ಮಗ ಯತೀಂದ್ರ ಸಹ ಮುಡಾ ಸದಸ್ಯರಾಗಿದ್ದರು, ಆಗ ನಾನು ವಿಪಕ್ಷ ನಾಯಕನಾಗಿದ್ದೆ. 14 ನಿವೇಶನಗಳು ನೋಂದಣಿ ಬಳಿಕ ನನ್ನ ಪತ್ನಿ ತಿಳಿಸಿದರು.
ಯಾವ ಬಡಾವಣೆಯಲ್ಲಿ ನೀಡಿದ್ದಾರೆಂಬ ವಿಷಯ ನನಗೆ ತಿಳಿದಿರಲಿಲ್ಲ. 14 ನಿವೇಶನಗಳಿಗೆ ಎಂದೂ ಭೇಟಿ ನೀಡಿರುವುದಿಲ್ಲ. ಈ ಬಗ್ಗೆ ಮುಡಾ ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಯಾವುದೇ ನಿರ್ದೇಶನ ನೀಡಿಲ್ಲ, ನಾನು ಆಗ ಅಧಿಕಾರದಲ್ಲೂ ಇರಲಿಲ್ಲ . 2023ರ ಚುನಾವಣಾ ಘೋಷಣಾ ಪ್ರಮಾಣ ಪತ್ರದಲ್ಲಿ 14 ನಿವೇಶನಗಳ ಬಗ್ಗೆ ನಮೂದಿಸಿರುವ ವಿಚಾರ ನೆನಪಿಲ್ಲ. ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದ್ದರಿಂದ 14 ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರ ನನ್ನ ಪತ್ನಿಯದ್ದೇ ಆಗಿದೆ.
14 ನಿವೇಶನಗಳ ಖಾತೆ ಮಾಡಿಕೊಡಲು ನನ್ನ ಪತ್ನಿ ಸಹಿ ಮಾಡುವ ಸ್ಥಳದಲ್ಲಿ ಕುಮಾರ್ ಸಹಿ ಮಾಡಿರುವ ವಿಚಾರ ನನಗೆ ತಿಳಿದು ಬಂತು. ನನ್ನ ಪತ್ನಿ ಅವರಿಗೆ ಸಹಿ ಮಾಡಲು ಅನುಮತಿಸಿರಬಹುದು. ನನ್ನ ಪತ್ನಿ ಮುಡಾಗೆ ನೀಡಿರುವ ಅರ್ಜಿಯಲ್ಲಿ ವೈಟ್ನರ್ ಹಾಕಿರುವ ಬಗ್ಗೆ ನನಗೆ ತಿಳಿದಿಲ್ಲ.