ಹಾಸನ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ. ಆದರೆ ಅವರ ಮನಸ್ಸಿನಲ್ಲಿ ಏನೇ ಅಸಮಾಧಾನವಿದ್ದರೂ ನಮ್ಮ ನಾಯಕರು ಅದನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆ (Election) ಎದುರಿಸಲಿದ್ದಾರೆ ಎಂದು ಜೆಡಿಎಸ್ (JDS) ವಿಧಾನ ಪರಿಷತ್ (Legislative Council) ಸದಸ್ಯ ಶರವಣ ಹೇಳಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು (HD Devegowda), ಕುಮಾರಣ್ಣ (HD Kumaraswamy) ಅವರು ಯಾರಿಗೂ ನೋವು ಮಾಡಿಲ್ಲ, ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್‌ನಿಂದ (Congress) ಬಹಳಷ್ಟು ನಾಯಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕಾಂತಾರ ಸಿನಿಮಾವನ್ನು ಕುಟುಂಬ ಸಮೇತ ನೋಡಲಿದ್ದಾರೆ ವೀರೇಂದ್ರ ಹೆಗ್ಗಡೆ
ಶಾಸಕ ಜಿ.ಟಿ.ದೇವೇಗೌಡರು (GT Devegowda) ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಾರೆ ಅಂತಾ ಬಿಂಬಿಸುತ್ತಿದ್ದರು, ಆದರೆ ಈಗ ಏನಾಯ್ತು? ಯಾರೇ ಇರಲಿ ನಮ್ಮ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಅವರ ಮನಸ್ಸಿನಲ್ಲಿ ಏನೇ ಅಸಮಾಧಾನವಿದ್ದರೂ ನಮ್ಮ ನಾಯಕರು ಅದನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆ ಎದುರಿಸುತ್ತಾರೆ. ನಾವೂ ಸಹ ಮನೆಬಾಗಿಲಿಗೇ ಹೋಗಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡ್ತೇವೆ. ನಮ್ಮ ಪಕ್ಷದಲ್ಲಿ ಯಾರೊಬ್ಬರೂ ಬಿಟ್ಟು ಹೋಗಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ
ನವೆಂಬರ್ 1ರಂದು ನಮ್ಮ ನಾಯಕರು 126 ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ ಹಾಸನ ಜಿಲ್ಲೆಯೂ ಇರುತ್ತದೆ. ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಎಲ್ಲರ ನಿರ್ಧಾರ ಒಂದೇ ಆಗಿರಲಿದೆ. ಪ್ರಜ್ವಲ್ ರೇವಣ್ಣ ಅವರೂ ಅನೇಕ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಕುಮಾರಣ್ಣ ಅವರಿಗಿಂತಲೂ ಸೀನಿಯರ್ ಆಗಿರುವ ವೈ.ಎಸ್.ವಿ.ದತ್ತಾ ಅವರು ನಮ್ಮೊಂದಿಗಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.