– ಕಳೆದ ಮೂರು ವರ್ಷಗಳಿಂದ ಅಸಮಾಧಾನ ಇದೆ ಎಂದ ಸಭಾಪತಿ
ಹುಬ್ಬಳ್ಳಿ: ರಾಜೀನಾಮೆ ( Resignation) ಕೊಡಬೇಕು ಎಂಬ ನಿರ್ಧಾರ ಮಾಡಿದ್ದು ನಿಜ. ಆದರೆ ಇದೀಗ ಬಹಳ ಜನ ನನಗೆ ಕಾಲ್ ಮಾಡಿ ಬೇಡ ಅನ್ನುತ್ತಿದ್ದಾರೆ ಎಂದು ರಾಜೀನಾಮೆ ವಿಚಾರವಾಗಿ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಸ್ಪಷ್ಟನೆ ನೀಡಿದ್ದಾರೆ.
ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್ ಆಗುತ್ತಿರುವ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಹಿ ಮಾಡಿದ ಪತ್ರ ಇನ್ನೂ ಲಾಕರ್‌ನಲ್ಲಿದೆ. ವೈರಲ್ ಆಗಿರುವುದು ಸಹಿ ಮಾಡದ ಪತ್ರ. ನನ್ನ ಪಿ.ಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ದಿನಾಂಕ 21 ಎಂದು ಹಾಕಿದ್ದೆ. ಈ ಪತ್ರ ಬಹಳ ಜನರ ಹತ್ತಿರ ಹೋಗಿದೆ. ಸಚಿವರು, ಪರಿಷತ್ ಸದಸ್ಯರು ಕಾಲ್ ಮಾಡುತ್ತಿದ್ದಾರೆ. ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಕೆಲವು ಸಲ ಹಿತೈಷಿಗಳ ಮಾತು ಕೇಳಬೇಕಾಗುತ್ತದೆ ಎಂದರು. ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್
ರಾಜೀನಾಮೆ ಕುರಿತು ವಿಚಾರ ಮಾಡುತ್ತೇನೆ. ಮಾನಸಿಕವಾಗಿ ಬೇಸರವಾಗಿದ್ದು ನಿಜ. ಹೀಗಾಗಿ ನಾನು ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದೆ. ಕೆಲವರ ನಡುವಳಿಕೆ ನನ್ನ ಮನಸಿಗೆ ಸಮಾಧಾನವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಅಸಮಾಧಾನವಾಗಿದೆ. ರಾಜ್ಯದ ಎಲ್ಲಾ ಕಡೆಯಿಂದ ಕರೆ ಬಂದಿದೆ, ಮಾನಸಿಕ ನೆಮ್ಮದಿ ಹಾಳಗಿದೆ. ನಾಳೆ ಒಂದು ದಿನ ಕುಳಿತು ವಿಚಾರ ಮಾಡುತ್ತೇನೆ. ಆತ್ಮೀಯರ ಮಾತು ಕೇಳಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!
ಈ ಮೊದಲು ಮಾತನಾಡಿದ್ದ ಹೊರಟ್ಟಿ, ನಾನು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಸಾಕಾಗಿದೆ, ಇನ್ನೂ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಇದೆ. ಜನರಿಗೆ ಮೋಸ ಮಾಡೋ ಟ್ರೆಂಡ್ ಬಂದಿದೆ. ಇದೀಗ ವಿಧಾನ ಮಂಡಲಕ್ಕೆ ಬಂದಿದೆ. ರಾಜಕಾರಣ ಬಹಳ ಕಲುಷಿತ ಆಗಿದೆ. ಕಾಲ ಕೆಟ್ಟಿದೆ, ಸದನದ ಗೌರವ ಹೋಗಿ ಬಹಳ ದಿನ ಆಗಿದೆ. ಚುನಾವಣೆಯಲ್ಲಿ ಸೋಲಿಸೋಕೆ ಆಗಿದಿದ್ರೆ ಈ ತರಹ ಟಾರ್ಗೆಟ್ ಮಾಡೋದು ಸರಿಯಲ್ಲ. ಇದೆಲ್ಲ ದುರ್ದೈವ. ಇತ್ತಿಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸಿಗೆ ಬೇಸರ ತರಿಸಿದೆ. ಈ ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ. ಸದನದಲ್ಲಿ ನಡೆದ ಬೆಳವಣಿಗೆ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್
ಮೇಲೆಮನೆ ಚಿಂತಕರ ಛವಾಡಿ ಎಂದು ಕರೆಯುತ್ತೇವೆ. ಆದರೆ ಸದನದಲ್ಲಿ ಪ್ಲೇಕಾರ್ಡ್ ಹಿಡಿದು ಬಂದ್ರು, ಘೋಷಣೆ ಕೂಗಿದರು. ಗದ್ದಲದಲ್ಲಿ ಕೆಲ ಬಿಲ್‌ಗಳು ಪಾಸ್ ಆಗಿವೆ. ಏನೂ ಚರ್ಚೆಯೇ ಆಗದೆ ಬಿಲ್ ಪಾಸ್ ಆಗುತ್ತಿವೆ. ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಸಣ್ಣದೊಂದು ಚರ್ಚೆ ಆಗಿದ್ದು ಬಿಟ್ಟರೆ, ಯಾವುದೇ ಬಿಲ್ ಬಗ್ಗೆ ಚರ್ಚೆಯೇ ಆಗಲಿಲ್ಲ. ಇನ್ನೂ ನಾನು ಸದನದಲ್ಲಿ ಇದ್ದು ಏನು ಪ್ರಯೋಜನ? ಹುದ್ದೆಗೆ ಘನತೆ ಗೌರವ ಇಲ್ಲದಿದ್ದ ಮೇಲೆ ಅಲ್ಲಿ ಇರಬಾರದು ಎಂದು ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ಇದನ್ನೂ ಓದಿ: ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ
ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಕ್ ರಾಜೀನಾಮೆ ಪತ್ರ ವೈರಲ್ ಆಗಿದೆ. ಬಸವರಾಜ ಹೊರಟ್ಟಿ ಲೆಟರ್ ಹೆಡ್‌ನಲ್ಲಿ ರಾಜೀನಾಮೆಯ ನಕಲಿ ಪತ್ರ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಎಂದು ಹೊರಟ್ಟಿ ಕಚೇರಿಯ ಸಿಬ್ಬಂದಿ ವರ್ಗ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: IPL 2025: ಗಾಯಕ್ವಾಡ್, ರಚಿನ್ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ