ಬೆಂಗಳೂರು/ದಾವಣಗೆರೆ: ಹೊನ್ನಾಳಿ ಚಂದ್ರಶೇಖರ್ (Honnalli Chandrashekhar) ನಿಗೂಢ ಸಾವಿನ ಪ್ರಕರಣ ಮತ್ತಷ್ಟು ಕಂಗಟ್ಟಾಗಿ ಮುಂದುವರಿದಿದೆ. ಇದು ಅಪಘಾತವೋ.. ಕೊಲೆಯೋ..? ಅನ್ನೋ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಚಂದ್ರಶೇಖರ್ ಕಾರು (Car) ಪತ್ತೆಯಾಗಿದ್ದ ದಾವಣಗೆರೆಯ ನ್ಯಾಮತಿ-ಹೊನ್ನಾಳಿ ಮಾರ್ಗದ ಸೊರಟೂರಿನ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪೊಲೀಸರು ಮರುಸೃಷ್ಠಿ ನಡೆಸಿದರು. ಖಾಸಗಿ ವಿಧಿ ವಿಜ್ಞಾನ ತಜ್ಞರಾದ ಡಾ. ಫಣೀಂದ್ರ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಮರುಸೃಷ್ಠಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೆಲವೊಂದು ಮಾಹಿತಿಯನ್ನು ಕೊಟ್ಟಿದ್ದಾರೆ.
- Advertisement
- Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಖಾಸಗಿ ವಿಧಿ ವಿಜ್ಞಾನತಜ್ಞರಾದ ಡಾ. ಫಣೀಂದ್ರ, ಚಂದ್ರಶೇಖರ್ ಕಾರ್ ಅಪಘಾತ ಆಗಿರೋದು ನಿಜ. ಆದರೆ ಸಾವು ಅಪಘಾತಕ್ಕೋ.. ಮತ್ಯಾವುದಕ್ಕೆ ಆಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕು ಅಂತಿದ್ದಾರೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ
100-120 ಕಿ.ಮೀ. ಸ್ಪೀಡ್‍ನಲ್ಲಿ ಕಾರ್ ಡ್ರೈವಿಂಗ್ ಮಾಡಲಾಗಿದೆ. ಚಂದ್ರು ಕಾರ್ ಟೈಯರ್ ಸ್ಫೋಟವಾಗಿದೆ. ಈ ವೇಳೆ ಮೊದಲು ಮೈಲುಗಲ್ಲಿಗೆ ಡಿಕ್ಕಿ ಹೊಡೆದು ನಂತರ ಕಾರಿನ ನಿಯಂತ್ರಣ ತಪ್ಪಿದೆ. ಸ್ಪೀಡ್ ಲಿಮಿಟ್ ಕಟ್ ಆದ ಬಳಿಕ ಕಾಂಕ್ರೀಟ್‍ನ ಹಂಪ್‍ಗೆ ಡಿಕ್ಕಿಯಾಗಿದೆ. ಬಳಿಕ ಕಾಲುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಕಾರು ಬಿದ್ದಿದೆ. ಕಾರಿನಲ್ಲಿ ಸಾಕಷ್ಟು ದೊಡ್ಡ ಡ್ಯಾಮೇಜ್ ಆಗಿದ್ದು, ಕಾರ್ ನಿಯಂತ್ರಣ ತಪ್ಪಿದ್ದರಿಂದ ಹಿಂಬದಿಗೂ ಡ್ಯಾಮೇಜ್ ಆಗಿದೆ ಎಂದು ಹೇಳಿದರು.