ದಾವಣಗೆರೆ: ಇತ್ತೀಚಿಗೆ ಪಠ್ಯಪುಸ್ತಕ ವಿವಾದ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಉಂಟಾಗಬಾರದು ಎಂದು ದಾವಣಗೆರೆಯಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.
ಪಠ್ಯ ಪುಸ್ತಕ ವಿಚಾರವಾಗಿ ಈಗ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಇದರಲ್ಲಿ ಯಾವುದೇ ಶಿಕ್ಷಣ ಇದ್ದರು ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಇವತ್ತಿನ ಪಠ್ಯದಲ್ಲಿ ನೈತಿಕ ಶಿಕ್ಷಣದ ಕೊರತೆ ಜಾಸ್ತಿ ಕಾಣುತ್ತಿದೆ. ಅದರ ಜೊತೆ ಮೂಲ ವಿಚಾರಗಳನ್ನು ತಿದ್ದದೇ ವಾಸ್ತವ ವಿಚಾರಗಳನ್ನು ಪಠ್ಯದಲ್ಲಿ ನೀಡಬೇಕು. ಈಗಾಗಲೇ ಪಠ್ಯ ಪುಸ್ತಕ ರಚನಾ ಸಮಿತಿ, ತಜ್ಞರ ಸಮಿತಿ ಅದಕ್ಕೆ ಮಾರ್ಗದರ್ಶನ ನೀಡುತ್ತಿದೆ. ಈ ವಿವಾದ ಬಗೆಹರಿದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಜೊತೆಗೆ ನೈತಿಕ ಪ್ರಜ್ಞೆ ಜಾಗೃತಿಗೊಳಿಸುವ, ನೈತಿಕ ಮೌಲ್ಯಗಳನ್ನು ಪಠ್ಯ ಹೊಂದಿರಬೇಕು ಎಂದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ
Advertisement
Advertisement
ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು. ಈ ಸಮಾಜಕ್ಕೆ ಬಸವಣ್ಣನವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕವಾಗಿ ಆರ್ಥಿಕವಾಗಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ಒಬ್ಬರಿಗೆ ಇಬ್ಬರಿಗೆ ಅಲ್ಲ, ಬದಲಿಗೆ ಎಲ್ಲರಿಗೂ ಬೇಕಾದ ವಿಚಾರಗಳನ್ನು ಬಸವಣ್ಣ ನೀಡಿದ್ದಾರೆ. ಅವರ ವಚನಗಳೇ ನಮಗೆ ಆಧಾರ. ಅವುಗಳನ್ನು ತಿದ್ದದೇ ಹೇಗಿದೆಯೋ ಹಾಗೆ ಕೊಡಬೇಕು ಎಂದರು. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಸುತ್ತಿದ ರೈತರು, ಕುರಿಗಾಹಿಗಳು
Advertisement
Advertisement
ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ಆ ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಠಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು. ಮುಖ್ಯಮಂತ್ರಿಗಳು ಹೇಳಿದ್ದಾರೆ, ಶಿಕ್ಷಣ ಸಚಿವರು ವರದಿ ಕೊಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀರಶೈವ ಪಂಥ ಸ್ಥಾಪನೆ ಬಸವ ಧರ್ಮ ವಿಚಾರವಾಗಿ ಗೊಂದಲ ಇದೆ. ಬಸವಣ್ಣ ಒಬ್ಬ ಮಾನವತವಾದಿ. ಮಾನವ ಬದುಕಿಗೆ ಕೊಟ್ಟಿರುವುದು ಬಹಳ ಮುಖ್ಯ ಎಂದರು.