ಬೆಂಗಳೂರು: ಸರ್ಕಾರ ಸ್ವಲ್ಪ ಮಟ್ಟಿಗೆ ಶೇಕ್ ಆಗಿರೋದು ಹೌದು, ಆದರೆ ಇದನ್ನು ನಾವು ಸರಿಪಡಿಸಿಕೊಂಡು ಆಡಳಿತ ಮುಂದುವರಿಸ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ಬೆಂಗಳೂರಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ – ಸಿದ್ದರಾಮಯ್ಯ ಎದುರಿಸಲಿರೋ ಸಂಕಷ್ಟಗಳೇನು?
Advertisement
Advertisement
ಸರ್ಕಾರ ಸ್ವಲ್ಪ ಮಟ್ಟಿಗೆ ಶೇಕ್ ಆಗಿರೋದು ಹೌದು, ಇಲ್ಲ ಅಂತ ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಆದರೆ ಇದನ್ನೆಲ್ಲ ನಾವು ಸರಿಪಡಿಸಿಕೊಂಡು ಆಡಳಿತ ಮುಂದುವರಿಸುತ್ತೇವೆ. ಸಂಪುಟ ಸಭೆಯಲ್ಲೂ ನಾವ್ಯಾರೂ ಬಿಜೆಪಿ (BJP) ಹುನ್ನಾರಕ್ಕೆ ಬಲಿಯಾಗೋದು ಬೇಡ, ಕಾನೂನು ಸಮರ ಮುಂದುವರಿಸಿಕೊಂಡು ಆಡಳಿತ ನಡೆಸುವ ತಿರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿ ಹೇಗಾದರೂ ಮಾಡಿ ಈ ಸರ್ಕಾರ ಬೀಳಿಸುವ ಸ್ಕೀಂ ಹಾಕಿಕೊಂಡಿದೆ. ಸಿದ್ದರಾಮಯ್ಯ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ
Advertisement
ಕಾನೂನು ಸಮರಕ್ಕೆ ಅಭಿಷೇಕ್ ಮನುಸಿಂಘ್ವಿ ಹಾಗೂ ಕಪಿಲ್ ಸಿಬಲ್:
ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟಕ್ಕಿಳಿದಿದ್ದಾರೆ. ನಾಳೆ (ಆ.19) ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ವಿರುದ್ಧ ದಾವೆ ಹೂಡಲಾಗುತ್ತಿದೆ. ಸಿಎಂ ಪರ ಕಾನೂನು ಹೋರಾಟಕ್ಕೆ ದೆಹಲಿಯಿಂದ ಹಿರಿಯ ವಕೀಲರೂ, ಕಾಂಗ್ರೆಸ್ ನಾಯಕರೂ ಆದ ಅಭಿಷೇಕ್ ಮುನು ಸಿಂಘ್ವಿ ಹಾಗೂ ಕಪಿಲ್ ಸಿಬಲ್ ರಾಜ್ಯಕ್ಕೆ ಬರ್ತಿದ್ದಾರೆ. ಈ ಸಂಬಂಧ ಮಾಹಿತಿ ಕೊಟ್ಟ ಗೃಹ ಸಚಿವ ಡಾ.ಜಿ ಪರಮೇಶ್ವರ್, ಕಾನೂನು ಹೋರಾಟಕ್ಕೆ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ನಾಳೆ ಬರ್ತಾರೆ. ಅವರು ನಮ್ಮ ಪಕ್ಷದ ಹಿರಿಯರು, ಕಾನೂನು ಹೋರಾಟಗಾರರು. ಇನ್ನೂ ಅವಶ್ಯಕತೆ ಬಿದ್ರೆ, ಸೀನಿಯರ್ ಕೌನ್ಸಿಲ್‌ರನ್ನೂ ಕರೆತರ್ತೀವಿ. ಅವರ ಮೂಲಕ ವಾದ ಮಾಡಿಸುತ್ತೇವೆ ಅಂದ್ರು.
Advertisement
ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು:
ಇನ್ನು ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತಾಡಿ, ನಾವು ಕಾನೂನು ಹೋರಾಟ ಹಾಗೂ ರಾಜಕೀಯ ಹೋರಾಟ ಮಾಡಲು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬಿಜೆಪಿಯವರೂ ಹೋರಾಟ ಮಾಡಲಿ, ಅದು ಅವರ ಹಕ್ಕು ಹಾಗೆಯೇ ನಾವೂ ಹೋರಾಟ ಮಾಡ್ತೀವಿ, ಇದು ನಮ್ಮ ಹಕ್ಕು. ಜಿಲ್ಲೆ, ತಾಲ್ಲೂಕುಗಳಲ್ಲಿ ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬಂದಿದೆ. ಅವರಿಗೆ ರಾಜಕೀಯ ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು. ನಾಳೆ (ಆ.19) ರಾಜ್ಯಾದ್ಯಂತ ಪಕ್ಷದಿಂದ ಶಾಂತಿಯುತ ಪ್ರತಿಭಟನೆಗೆ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ.
ಹೆಚ್ಡಿಕೆ/ಜೊಲ್ಲೆ/ನಿರಾಣಿ/ರೆಡ್ಡಿ ಪ್ರಕರಣಗಳಲ್ಲಿ ಕಾನೂನು ಕ್ರಮ:
ರಾಜ್ಯಪಾಲರ ತೀರ್ಮಾನವೂ ರಾಜಕೀಯದ್ದು, ಸಚಿವ ಸಂಪುಟ ತೀರ್ಮಾನವನ್ನೇ ಅವರು ತಿರಸ್ಕರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಹೆಚ್‌ಡಿಕೆ, ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಬಾಕಿ ಉಳಿಸಿಕೊಂಡಿರೋದು ಕಾಂಗ್ರೆಸ್‌ಗೆ ಕೆರಳಿಸಿದೆ. ಇದೀಗ ಈ ನಾಲ್ವರ ವಿರುದ್ಧವೂ ಲೋಕಾಯುಕ್ತದಲ್ಲಿ ಕಾನೂನು ಪ್ರಕ್ರಿಯೆ ಚುರುಕುಗೊಳಿಸುವ ಸುಳಿವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಟ್ಟಿದ್ದಾರೆ.
ಮುರುಗೇಶ್ ನಿರಾಣಿ, ಜೊಲ್ಲೆ, ರೆಡ್ಡಿ, ಹೆಚ್ಡಿಕೆ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಡದ ಬಗ್ಗೆ ನಾವು ಇಲ್ಲಿಯವರೆಗೆ ತಲೆಕೆಡಿಸಿಕೊಂಡಿರಲಿಲ್ಲ. ನಾವು ದ್ವೇಷದ ರಾಜಕಾರಣ ಮಾಡೋದು ಬೇಡ ಅಂತ ಸುಮ್ಮನಿದ್ದೆವು. ಈಗ ನಾವು ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತೇವೆ. ರಾಜ್ಯಪಾಲರು ಈ ನಾಲ್ವರಿಗೆ ಒಂದು ನ್ಯಾಯ ಸಿದ್ದರಾಮಯ್ಯನವರಿಗೆ ಒಂದು ನ್ಯಾಯ ಕೊಡೋ ಮೂಲಕ ಪಕ್ಷಪಾತ ಮಾಡಿದ್ದಾರೆ. ಕಾನೂನು ಅವಕಾಶ ಬಳಸಿಕೊಂಡು ಮುಂದುವರೆಯುತ್ತೇವೆ ಅಂದ್ರು.
ಇನ್ನು, ಬಿಎಸ್ವೈ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ತಡೆಯಾಜ್ಞೆ ತೆರವು ಮಾಡುವ ವಿಚಾರ ಬಗ್ಗೆ ಮಾತಾಡಿದ ಪರಮೇಶ್ವರ್, ಕೋರ್ಟ್ ಒಂದು ದಿನಾಂಕ ಕೊಟ್ಟಿದೆ. ಆ ದಿನಾಂಕದಂದು ನಮ್ಮ ಎಜಿ ಹಾಗೂ ಹಿರಿಯ ವಕೀಲರು ಕೋರ್ಟ್ ಗೆ ಹೋಗ್ತಾರೆ. ಬಿಎಸ್ವೈ ವಿರುದ್ಧ ಇರುವ ತಡೆಯಾಜ್ಞೆ ತೆರವು ಮಾಡಿಸುವ ಪ್ರಯತ್ನ ಮಾಡ್ತಾರೆ ಅಂದ್ರು.
ಇದನ್ನೂ ಓದಿ: ಸಿದ್ದರಾಮಯ್ಯ ಹಠ ಮಾಡದೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಎ.ಮಂಜು
ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್ 17ಎ ಅಡಿ ಸಿಎಂಗೆ ಯಾರು, ಸಚಿವರಿಗೆ ಯಾರು ಅನುಮತಿ ಕೇಳಬೇಕು ಅಂತಾ ಕೇಂದ್ರದ ಮಾರ್ಗಸೂಚಿ ಇದೆ. ಸಿಎಂಗೆ ಡಿಜಿಪಿ ತನಿಖೆಗೆ ಅನುಮತಿ ಕೇಳಬೇಕು. ಇನ್ನೊಂದು ಕಡೆ ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಹಲವು ತೀರ್ಪುಗಳನ್ನು ಪ್ರಸ್ತಾಪ ಮಾಡಿ ರಾಜ್ಯಪಾಲರಿಗೆ ಸ್ಪಷ್ಟೀಕರಣ ಕಳಿಸಿದ್ದೇವೆ. ರಾಜ್ಯಪಾಲರು ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಆಡೋ ಮಕ್ಕಳಿಗೂ ಗೊತ್ತಾಗಿದೆ, ರಾಜ್ಯಪಾಲರು ಉದ್ದೇಶ ಪೂರ್ವಕವಾಗಿ ಅನುಮತಿ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ ಅಸಾಂವಿಧಾನಿಕ ವಿಚಾರ. ನಾವು ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ. ಆದರೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಮುಡಾ ತನಿಖೆಗೆ ನ್ಯಾಯಾಲಯ ಯಾರಿಗೆ ರೆಫರ್ ಮಾಡುತ್ತೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಇರುವ ಆಯ್ಕೆ ಲೋಕಾಯುಕ್ತ ಮಾತ್ರ. ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರೋದ್ರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೇ ಕೊಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.