ಲಕ್ನೋ: ವಾರಣಾಸಿ ನ್ಯಾಯಾಲಯವು ಇತ್ತೀಚಿಗೆ ಜ್ಞಾನವ್ಯಾಪಿ ಮಸೀದಿ ಸಂಕೀರ್ಣ ವೀಡಿಯೋ ಗ್ರಾಫಿಕ್ ಸಮೀಕ್ಷೆಗೆ ಆದೇಶ ನೀಡಿದೆ. ಇದು ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ವಾಕ್ಸಮರ ಕಾರಣವಾಗಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಂಗೀತ್ ಸೋಮ್ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
Advertisement
ವಾರಾಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯನ್ನು ಬಾಬ್ರಿ ಮಸೀದಿಯಂತೆ ಕೆಡವಲಾಗುವುದು. ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ. ಎಲ್ಲವನ್ನೂ ಕೆಡವುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!
Advertisement
ಮೀರತ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಂಗೀತ್ ಸೋಮ್, 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈಗ ಜ್ಞಾನವ್ಯಾಪಿ ಮಸೀದಿಯ ಸರದಿ. 2022ರಲ್ಲಿ ನಾವು ಈ ಮಸೀದಿಯನ್ನು ಕೆಡವುತ್ತೇವೆ ಎಂದಿದ್ದಾರೆ.
Advertisement
Advertisement
ಮುಸ್ಲಿಂ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನು ಹಿಂಪಡೆಯುವ ಸಮಯ ಈಗ ಬಂದಿದೆ. ಬಾಬರಿ ಮಸೀದಿ ಕೆಡವಿದ ದಿನವೇ ಮುಸ್ಲಿಮರಿಗೆ ಇದು ಗೊತ್ತಿರಬೇಕಿತ್ತು. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕಿತ್ತು. ನಾವು ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು
ಇದು 1992ರ ಯುಗವಲ್ಲ, 2022ರ ಯುಗ ದೇಶದ ಯುವಶಕ್ತಿ ಅಂದಿಗಿಂತಲೂ 2 ಪಟ್ಟು ಹೆಚ್ಚಾಗಿದೆ. ಜೊತೆಗೆ ಇದು ಮತ್ತೊಂದು ನಿರ್ಧಾರ ಕೈಗೊಳ್ಳಲು ಉತ್ತಮ ನಿರ್ಧಾರ ಎಂದು ಕರೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್, ಸಮಾಜದಲ್ಲಿ ಅಶಾಂತಿ ಮತ್ತು ವಿಭಜನೆಯನ್ನು ಸೃಷ್ಟಿಸಲು ಇದು ಬಿಜೆಪಿಯ ನಿಖರವಾದ ಗೇಮ್‌ಪ್ಲಾನ್. ಅದಕ್ಕಾಗಿಯೇ ಜ್ಞಾನವ್ಯಾಪಿ ಹಾಗೂ ತಾಜ್‌ಮಹಲ್ ವಿಷಯವನ್ನು ಎತ್ತಲಾಗಿದೆ. ಇಂತಹ ಹೇಳಿಕೆಗಳಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ನಾವು ಈಗಾಗಲೇ ತುಂಬಾ ಅಪಾಯಕಾರಿ ಸನ್ನಿವೇಶಕ್ಕೆ ಹೋಗುತ್ತಿದ್ದೇವೆ ಎಂಬುದನ್ನು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.