ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಜನಸಂಖ್ಯೆ ನಿಯಂತ್ರಣ (Population Control) ಕುರಿತು ರಾಜ್ಯ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಹುಟ್ಟುಹಾಕಿದೆ. ಈ ಹೇಳಿಕೆ ನಂತರ ಬಿಹಾರದ ಬಿಜೆಪಿ ಘಟಕವು ಭಾರೀ ಟೀಕೆ ವ್ಯಕ್ತಪಡಿಸಿದೆ. ಮಹಿಳಾ ಶಾಸಕರೂ ಅಸಮಾಧಾನ ಹೊರಹಾಕಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav), ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ ನಂತರ ಬಿಹಾರ ಸಿಎಂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡುತ್ತಾ ವೀಡಿಯೋವೊಂದರಲ್ಲಿ, ಈ ಹಿಂದೆ ಶೇ.4.3 ರಷ್ಟಿದ್ದ ಫಲವತ್ತತೆ ದರವು ಕಳೆದ ವರ್ಷ ಶೇ.2.9ಕ್ಕೆ ಇಳಿದಿದೆ ಎಂದು ಹೇಳಿದ್ದರು. ಇದನ್ನು ಅಶ್ಲೀಲ ಎಂದು ಬಿಜೆಪಿ ಟೀಕಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ: ಈಶ್ವರಪ್ಪ ವ್ಯಂಗ್ಯ
Advertisement
Advertisement
ದೇಶದ ರಾಜಕೀಯದಲ್ಲಿ ನಿತೀಶ್ ಕುಮಾರ್ ಅವರಷ್ಟು ಅಸಭ್ಯ ನಾಯಕರಿಲ್ಲ. ನಿತೀಶ್ ಬಾಬುಗೆ ವಯಸ್ಕರ ಬಿ-ಗ್ರೇಡ್ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿಯಿದೆ ಅನ್ನಿಸುತ್ತೆ. ಅವರ ಡಬಲ್ ಮೀನಿಂಗ್ ಹೇಳಿಕೆಗಳನ್ನು ನಿಷೇಧಿಸಬೇಕು. ತಮ್ಮ ಕಂಪನಿಗಳಿಂದಲೇ ಅವರು ಪ್ರಭಾವಿತರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಎಕ್ಸ್ ಖಾತೆಯಲ್ಲಿ ಟೀಕಿಸಿದೆ. ಇದನ್ನೂ ಓದಿ: ಲೋಕಸಮರ ಗೆಲ್ಲಲು ನಿತೀಶ್ ತಂತ್ರ : ಬಿಹಾರದಲ್ಲಿ ಮೀಸಲಾತಿ ಪ್ರಮಾಣ 65% ಏರಿಕೆ – ಜಾತಿ ಸಮೀಕ್ಷೆಯಲ್ಲಿ ಏನಿದೆ?
Advertisement
Advertisement
ಮುಖ್ಯಮಂತ್ರಿ ಅವ್ರಿಗೆ 70 ವರ್ಷ ದಾಟಿದ್ದರೂ ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವೂ ಹೇಳಲಾಗದಂತಹ ಪದ ಬಳಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಶಾಸಕಿ ಗಾಯತ್ರಿದೇವಿ ಹೇಳಿದ್ದಾರೆ. ಶಾಸಕಿ ಪ್ರತಿಮಾ ದಾಸ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಿಎಂ ಅವರು ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಶಾಲೆಗಳಲ್ಲಿ ವಿಜ್ಞಾನ ವಿಭಾಗ ಜೀವಶಾಸ್ತ್ರದಲ್ಲಿ ಕಲಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.