ಚಿಕ್ಕಮಗಳೂರು: ಕಾಂಗ್ರೆಸ್ಸಿಗರು ಇಂದು ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದು ಪ್ರಶ್ನಾರ್ಥಕ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
Advertisement
ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ ಜನ ಒಗ್ಗಟ್ಟು ಪ್ರದರ್ಶನ ಮಾಡಿ ಹಿಂದೆ ಪರಮೇಶ್ವರ್ ಅವರನ್ನು ಸೋಲಿಸಿ ಕಾಲೆಳೆದರು. ಹಾಗಾಗಿ ಈ ಒಗ್ಗಟ್ಟು ಎಷ್ಟು ದಿನ ಇರುತ್ತೆ ನೋಡೋಣ. ಈ ಹಿಂದೆ ರಾಮಮಂದಿರ ಕಟ್ಟಲು ಹೊರಟಾಗ ಶಾಲೆ ಕಟ್ಟಿ ಅಂತ ಬಿಜೆಪಿಗೆ ಪಾಠ ಹೇಳಿದ್ದರು. ಈಗ ಹತ್ರತ್ರ ನೂರು ಕೋಟಿ ರೂ. ಖರ್ಚು ಮಾಡಿ ಕಾರ್ಯಕ್ರಮ ಮಾಡುವ ಬದಲು ಮಳೆಯಿಂದ ಬದುಕು ಕಳೆದುಕೊಂಡವರ ಬದುಕನ್ನು ಕಟ್ಟಿಕೊಡಬಹುದಿತ್ತು. ಆ ಜನ ನಿಮ್ಮ ಫೋಟೋವನ್ನು ಹಿಡಿದುಕೊಂಡು ಸಾಯೋವರೆಗೂ ಹಾಡಿ ಹೊಗಳುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: 31ರ ಮಹಿಳೆಗೆ ಮಂಕಿಪಾಕ್ಸ್ – ದೆಹಲಿಯಲ್ಲಿ 4, ದೇಶದಲ್ಲಿ ಒಟ್ಟು 9ನೇ ಕೇಸ್
Advertisement
Advertisement
ಮಾನವೀಯ ಕಳಕಳಿಯ ಸಂವೇದನಾ ಶೀಲತೆಯ ಇಲ್ಲದ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿರೋದು ದುರುದುಷ್ಟಕರ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ, ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಯನ್ನು ಬಿಜೆಪಿ ಬೆಳೆಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಿಎಫ್‍ಐ-ಎಸ್‍ಡಿಪಿಐ ಸಂಘಟನೆಯನ್ನು ಬಿಜೆಪಿ ಬೆಳೆಸಿದ್ದರೆ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ನೀವ್ಯಾಕೆ 2,500 ಜನರ ಕೇಸನ್ನು ವಾಪಸ್ ಪಡೆದಿರಿ ಎಂದು ಪ್ರಶ್ನಿಸಿದ್ದಾರೆ. ಈ ಸಂಘಟನೆಗಳ ಕೇಸನ್ನು ವಾಪಸ್ ಪಡೆಯಿರಿ ಅಂತ ನಾವೇನು ನಿಮಗೆ ಅರ್ಜಿ ಕೊಟ್ಟಿರಲಿಲ್ಲ. ಈಗ ಪಿಎಫ್‍ಐ-ಎಸ್‍ಡಿಪಿಐ ಸಂಘಟನೆಗಳ ಬಗ್ಗೆ ಮಾತನಾಡುವವರು ಈ ಹಿಂದೆ ಸಿಎಂ ಆದಾಗ ಈ ಸಂಘಟನೆಗಳು ಕ್ರಿಮಿನಲ್ ಅಂತ ಗೊತ್ತಿರಲಿಲ್ವಾ. ಕಾಂಗ್ರೆಸ್ ಪಕ್ಷ ಟಾರ್ಗೆಟ್ ಮಾಡ್ತಿರೋದು ಆರ್‌ಎಸ್‌ಎಸ್ ಪಕ್ಷವನ್ನು. ಪಿಎಫ್‍ಐ-ಎಸ್‍ಡಿಪಿಐ ಸಂಘಟನೆಗಳು ಟಾರ್ಗೆಟ್ ಮಾಡ್ತಿರೋದು ಕೂಡ ಆರ್‌ಎಸ್‌ಎಸ್ ಸಂಘಟನೆಯನ್ನು ಹಾಗಾಗೀ ಆರ್‌ಎಸ್‌ಎಸ್ ವಿರೋಧಿಸುವುದು ನಿಮ್ಮಿಬ್ಬರ ಸಮಾನ ಉದ್ದೇಶ. ನೆಂಟಸ್ತನ ಇದ್ದರೆ ಅದು ನಿಮ್ಮಿಬ್ಬರಿಗೆ ಇರೋದು. ಹಾಗಾಗಿ ಕೇಸನ್ನು ವಾಪಸ್ ಪಡೆದುಕೊಂಡಿದ್ದೀರಾ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣ – ಮಂತ್ರಾಲಯ ಛತ್ರ ಅಭಿವೃದ್ದಿಗೆ ವಿಶೇಷ ಅನುದಾನ ಬಿಡುಗಡೆ
Advertisement
ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗಿದ್ರೆ, ವೈಚಾರಿಕ ಕಾರಣಕ್ಕೆ ಹತ್ಯೆಗಳು ನಡೆಯುತ್ತಿದ್ದರೆ ಅದಕ್ಕೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಕಾರಣ. ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿರೋ ಸಿದ್ದರಾಮಯ್ಯ ನೂರು ಕಾಲ ಚೆನ್ನಾಗಿರಲಿ. ಶುಭಕೋರಿದ ಬಳಿಕ ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸರಿ ಇಲ್ಲ. ಕಳೆದ ಎರಡ್ಮೂರು ದಿನಗಳಿಂದ ಭಾರೀ ಮಳೆಯಾಗಿ 13ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಜನರು ಮನೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಸೂತಕದ ಮನೆಯಲ್ಲಿ ಸಂಭ್ರಮ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ನಾವು ಕೂಡ ಕಳೆದ ಜುಲೈ 28ರಂದು ದೊಡ್ಡ ಮಟ್ಟದಲ್ಲಿ ಜನೋತ್ಸವ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಆದ್ರೆ, ನಮ್ಮ ಕಾರ್ಯಕರ್ತ ಕೊಲೆಯಾದ ವಿಚಾರ ತಿಳಿದು ಆ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವು. ಆದರೆ, ಸಂವೇದನ ಶೀಲತೆ-ಮಾನವೀಯತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
Live Tv
[brid partner=56869869 player=32851 video=960834 autoplay=true]