ದಾವಣಗೆರೆ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂಬ ನೋವಿದೆ ಅವರಿಗಿದೆ. ನಾನು ಹಿಂದೆ ಸರಿಯುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು (SriRamulu) ಮೀಸಲಾತಿ ಕೊಡಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದಾರೆ.
ವಿಜಯನಗರ (Vijayanagar) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಮಾತನಾಡಿದ ಅವರು, ಪರಮ ಪೂಜ್ಯ ಪ್ರಸನ್ನಾನಂದಪುರಿ ಶ್ರೀಗಳು (Prasannananda Puri Sri) ಕಳೆದ ಮೂರು ತಿಂಗಳಿನಿಂದ ಧರಣಿ ಮಾಡುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂಬ ನೋವು ಅವರಿಗಿದೆ. ಕರ್ನಾಟಕದಲ್ಲಿ ಬೇರೆ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಪರಮಪೂಜ್ಯರ ಮೀಸಲಾತಿ ಹೋರಾಟ ಮಾಡುತ್ತಿರುವ ಬಗ್ಗೆ ಸಮುದಾಯಕ್ಕೆ ನೋವು ಇದೆ, ಸಮುದಾಯಕ್ಕೆ ನೋವು ಬಂದಾಗ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು
ನಾನು ಅಕ್ಟೋಬರ್ 8 ರಂದು ಸರ್ವ ಪಕ್ಷ ಸಭೆ ಕರೆಯುತ್ತಿದ್ದೇವೆ, ಅದರಲ್ಲಿ ಜೆಡಿಎಸ್ (JDS) ಕಾಂಗ್ರೆಸ್ (Congress) ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರಿರುತ್ತಾರೆ. ಅಲ್ಲಿ ತೀರ್ಮಾನ ತೆಗೆದುಕೊಂಡು ಎಸ್‍ಸಿಗೆ ಶೇ. 18 ಎಸ್‍ಟಿಗೆ 7.5 ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಮೀಸಲಾತಿ ವಿಚಾರದಲ್ಲಿ ನಮ್ಮ ಶಾಸಕರು ನಮ್ಮ ಬೆಂಬಲಕ್ಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಯಿಂದ ಬೇರ್ಪಡಿಸಿ ಪರಿಶಿಷ್ಟ ವರ್ಗಗಳ ಸಚಿವಾಲಯ ಮಾಡಿದ್ದಾರೆ. ನಮ್ಮ ಸಮುದಾಯದ ಜನರಿಗೆ ಸೌಲಭ್ಯಗಳು ಸಿಗಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿ ನಮ್ಮ ಸಮುದಾಯಕ್ಕೆ ಕೊಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು