ಸ್ಯಾಂಡಲ್‌ವುಡ್ (Sandalwood) ನಟ ಡಾಲಿ ಧನಂಜಯ್ (Daali Dhananjay) ಅವರು ಕನ್ನಡ ಚಿತ್ರಗಳ ಜೊತೆ ಬಹುಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ (Pandavapura) ಶಾಲೆಗೆ ಡಾಲಿ ಭೇಟಿ ನೀಡಿ, ಮಕ್ಕಳಿಗೆ ಚಾಕ್ಲೇಟ್ ನೀಡಿ ಸ್ವಾಗತಿಸಿದ್ದಾರೆ.
Advertisement
ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಅವರು ಸದ್ಯ ಉತ್ತರಕಾಂಡ, ಪುಷ್ಪ 2 (Pushpa 2) ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬ್ಯುಸಿ ನಟನಾಗಿ ಡಾಲಿ (Daali) ಡಿಮ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ.
Advertisement
Advertisement
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾಲಿ ಧನಂಜಯ್, ಸುಮ್ಮನೆ ನನಗೆ ರಾಜಕೀಯ ಪ್ರಶ್ನೆ ಕೇಳಿ ತಗಲಾಕಿಸುತ್ತೀರಾ. ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ನಾನು ಮಾತಡಲ್ಲ. ಸಾಮಾನ್ಯ ಮನುಷ್ಯನಾಗಿ ನಾನು ಹೇಳ್ತೀನಿ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
Advertisement
ತಿಂಗಳಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅಡುಗೆ ಮಾಡಿಕೊಂಡು ಊಟ ಮಾಡಿಕೊಂಡು ಮನೆಯಲ್ಲಿ ಇರೋಕೆ ಆಗಲ್ಲ. ಅಕ್ಕಿ ಕೊಟ್ಟರೆ ಹಸಿವನ್ನು ನೀಗಿಸುತ್ತೆ ಇತರೆ ಖರ್ಚಿಗೆ ಜನ ದುಡಿಯುತ್ತಾರೆ. ಬಡ ಮನುಷ್ಯನಿಗೆ ಅಕ್ಕಿ ಕೊಟ್ಟರೆ ಸೋಮಾರಿ ಆಗುತ್ತಾನೆ ಅನ್ನೋದು ತಪ್ಪು, ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಎಂದು ಧನಂಜಯ್ ಅಭಿಪ್ರಾಯ ಪಟ್ಟಿದ್ದಾರೆ. ತಿಂಗಳ ಆದಾಯಕ್ಕಿಂತ ಕಡಿಮೆ ಇರುವವರ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ ಆದರಿಂದ ಜನ ಸೋಮಾರಿಗಳು ಆಗುತ್ತಾರೆ ಅಂದ್ರೆ ಅದು ತಪ್ಪು ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.