ಬೆಂಗಳೂರು: ಜಾತಿಗಣತಿ ವರದಿಯನ್ನು (Caste Census Report) ಸಂಪೂರ್ಣವಾಗಿ ನೋಡದೇ ಸಮೀಕ್ಷೆ ಸರಿಯಿಲ್ಲ ಎಂದು ಹೇಳೋದು ಸರಿಯಲ್ಲ. ವರದಿ ಹೊರಗೆ ಬರಲಿ, ಅದರ ಅಂಕಿಅಂಶಗಳನ್ನ ಚರ್ಚೆ ಮಾಡೋಣ ಎಂದು ಸಚಿವ ಸಂತೋಷ್ ಲಾಡ್ (Santosh Lad) ತಿಳಿಸಿದ್ದಾರೆ.
ಜಾತಿಗಣತಿಗೆ ಹಲವರು ವಿರೋಧ ಮಾಡುತ್ತಿರುವ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ದೇಶಗಳಲ್ಲಿ ರಾಜಕೀಯವಾಗಿ ನ್ಯಾಯ ಕೊಡಬೇಕಾದರೆ ಒಂದು ಜಾತಿಗಣತಿ ಬೇಕು. ಸರ್ಕಾರ ಜಾತಿಗಣತಿ ಮಾಡಿದೆ. ಜಾಸ್ತಿ ಇದೆ, ಕಡಿಮೆ ತೋರಿಸಿದ್ದಾರೆ ಎಂದು ಎಲ್ಲಾ ಸಮುದಾಯಗಳಿಗೆ ಭಿನ್ನಾಭಿಪ್ರಾಯ ಇದೆ. ಸರ್ಕಾರ ಇದರ ಬಗ್ಗೆ ಪರಿಶೀಲನೆ ಮಾಡುತ್ತದೆ. ನನಗೆ ಇರೋ ಮಾಹಿತಿ ಪ್ರಕಾರ ಜಾತಿಗಣತಿ ವರದಿ ಬಗ್ಗೆ ಸಿಡಿ ಕೊಡುತ್ತಾರೆ ಎಂಬ ಮಾಹಿತಿ ಇದೆ. ವಿಧಾನಸಭೆವಾರು ಸಿಡಿ ಕೊಡುವ ಸಾಧ್ಯತೆ ಇದೆ. ಸಿಡಿಯನ್ನು ನಿಮ್ಮ ಕೈಗೆ ಕೊಟ್ಟಾಗ ನಿಮ್ಮ ತಾಲೂಕಿನಲ್ಲಿ, ಸಮುದಾಯಗಳು ಕಡಿಮೆ ಜಾಸ್ತಿ ಇದ್ದರೆ ಅಲ್ಲಿ ನ್ಯಾಯ ಕೊಡಲು ಅವಕಾಶ ಇದೆ. ವರದಿಯೇ ಜಾರಿ ಆಗಿಲ್ಲ. ಯಾರೇ ಸರ್ವೆ ಮಾಡಿದರೂ ಇಂತಹ ಅಸಮಾಧಾನ ಬರುತ್ತದೆ. ವರದಿ ನೋಡದೇ ವಿರೋಧ ಮಾಡೋದು ಬೇಡ ಎಂದರು. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು
ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ 40 ಲಕ್ಷ ವೋಟ್ ವ್ಯತ್ಯಾಸ ಬರುತ್ತದೆ. ವ್ಯತ್ಯಾಸ ಕಂಡುಹಿಡಿಯಬೇಕಾದರೆ ಸಮರ್ಪಕವಾಗಿ ಚರ್ಚೆ ಆಗಬೇಕು. ಆದರೆ ನೆಗೆಟಿವ್ ಚರ್ಚೆ ಆಗಬಾರದು. ಮೊದಲೇ ಅಪಸ್ವರ ಎತ್ತೋದು ಸರಿಯಲ್ಲ. ವರದಿ ಮೊದಲು ಚರ್ಚೆ ಆಗಲಿ. ಅಮೇಲೆ ನೋಡೋಣ. ಮೊದಲೇ ವಿರೋಧ ಬೇಡ ಎಂದು ಮನವಿ ಮಾಡಿದರು. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್ ಕಿಡಿ
ಮನೆ ಮನೆಗೆ ಸಮೀಕ್ಷೆ ಮಾಡಿಲ್ಲ ಅಂದರೆ ಸಿಡಿ ಬರುತ್ತದೆ ಅಲ್ಲವಾ? ಸಮೀಕ್ಷೆ ಮಾಡಿರೋರು ಶಿಕ್ಷಕರು. ನಾವೇನು ಟೀಚರ್‌ಗೆ ಅಲ್ಲಿ ಹೋಗಬೇಡಿ ಅಂತ ಹೇಳೋಕೆ ಆಗಲ್ಲ. ನಿಮ್ಮ ಮನೆ ಯಾವುದು ಎಂದು ಸರ್ಕಾರಕ್ಕೆ ಗೊತ್ತಿರುತ್ತಾ?ಇಂತಹವರ ಮನೆಗೆ ಹೋಗಿ ಅಂತ ನಿರ್ದೇಶನ ಕೊಡೋಕೆ ಆಗಲ್ಲ. ಸರ್ವೆ ಅಂಕಿ ಅಂಶಗಳು ಬರಲಿ. ನಿಮ್ಮ ಊರು, ತಾಲೂಕಿನಲ್ಲಿ ಎಷ್ಟಾಗಿದೆ ಎಂದು ಅಂಕಿಅಂಶಗಳು ಕೊಟ್ಟರೆ ಆಗ ತಪ್ಪಾಗಿದೆ ಎಂದು ಹೇಳಬಹುದು. ಅದಕ್ಕೂ ಮುಂಚೆ ವಿರೋಧ ಮಾಡೋದು ಬೇಡ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್
ರಾಜಕೀಯ ದೃಷ್ಟಿಯಿಂದ ಹೇಳೋದನ್ನು ಸ್ವಾಗತ ಮಾಡೋಣ. ಸ್ವಲ್ಪ ಕಾಯೋಣ. ದಾಖಲಾತಿ ತೆಗೆದುಕೊಳ್ಳಿ. ದಾಖಲಾತಿ ಚೆಕ್ ಮಾಡಿದ ಮೇಲೆ ಲೋಪದೋಷ ಕಂಡು ಬಂದರೆ ಆಗ ಒಪ್ಪೋಣ. ಸಂಪೂರ್ಣವಾಗಿ ತಪ್ಪು ಅನ್ನೋದು ಸರಿಯಲ್ಲ.ನಮ್ಮ ಮನೆಗೆ ಬಂದಿದ್ದು ನನಗೆ ನೆನಪೇ ಇಲ್ಲ. ಎಲ್ಲರು ನಮ್ಮನೆಗೆ ಬಂದಿಲ್ಲ ಅಂದರೆ ಸರಿ ಇರಲ್ಲ. 95% ಮನೆಗೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ಸಿಡಿ ಬರುತ್ತೆ, ಅದಾದ ಮೇಲೆ ನೋಡಿಕೊಳ್ಳಿ. ಅದರಲ್ಲಿ ಸಮಸ್ಯೆ ಇದ್ದರೆ ಸರಿ ಮಾಡಬಹುದು. ಸಂಪೂರ್ಣವಾಗಿ ವಿರೋಧ ಮಾಡೋದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ
ಡಿಸಿಎಂ ಡಿಕೆಶಿವಕುಮಾರ್ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆತಂಕ ಇರುತ್ತದೆ ಎಲ್ಲರಿಗೂ. ನಾನು ಅದನ್ನ ವಿರೋಧ ಮಾಡಲ್ಲ. ವರದಿ ಮೊದಲು ಹೊರಗೆ ಬರಲಿ. ಸರ್ಕಾರದ ದಾಖಲೆ ಮೊದಲು ನೋಡಿ ಆಮೇಲೆ ತಮ್ಮ ತಾಲೂಕಿನಲ್ಲಿ ಕಡಿಮೆ ಇದೆ ಅಂದರೆ ಮಾಹಿತಿ ಕೊಡಿ. ಸುಮ್ಮನೆ ಕಡಿಮೆ ಇದೆ, ಜಾಸ್ತಿ ಇದೆ ಅಂದರೆ ಸರಿಯಲ್ಲ. ದಾಖಲೆಗಳೇ ಯಾರಿಗೂ ಸಿಕ್ಕಿಲ್ಲ. ಹೀಗಿರುವಾಗ ಅದು ತಪ್ಪು ಅಂತ ಹೇಗೆ ಹೇಳ್ತೀರಾ? ತಪ್ಪು ಅನ್ನೋಕೆ ಯಾವುದೇ ದಾಖಲಾತಿ ಇಲ್ಲ.ನಿಮ್ಮ ಮನೆಗೆ ಬಂದಿಲ್ಲ ಅಂದರೆ ಅದು ಸರಿ ಇಲ್ಲ ಅಂತ ಅರ್ಥನಾ? ಸಮುದಾಯಗಳ ಲೆಕ್ಕ ಕೇಳಿದರೆ ಕರ್ನಾಟಕದಲ್ಲಿ 12 ಕೋಟಿ, 18 ಕೋಟಿ ಜನಸಂಖ್ಯೆ ಆಗುತ್ತದೆ. ಸರ್ಕಾರ ಸರ್ವೆ ಮಾಡಿದೆ. ಸರ್ವೆ ಸಿಡಿ ಮೂಲಕ ಕೊಡುತ್ತಾರೆ. ಅದನ್ನ ಮೊದಲು ನೋಡಿ. ವರದಿ ಬಿಡುಗಡೆ ಆಗಬೇಕು. ಚರ್ಚೆ ಆಗಬೇಕು. ಮೊದಲೇ ತಪ್ಪು ಇದೆ ಅಂತ ಹೇಳಬೇಡಿ ಎಂದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ