ಶಿವಮೊಗ್ಗ: ಮುಸ್ಲಿಮರ ಮತಕ್ಕಾಗಿ (Muslims Vote) ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಎಂದು ಕಿಡಿ ಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಹಿಂದೂ ಎಂಬ ಪದ ಜಗತ್ತಿನ ತುಂಬ ಹರಡಿಕೊಂಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೂ, ಹಿಂದೂ ಮುಸ್ಲಿಂ ಎಂದು ಕರೆಯುತ್ತಾರೆ. ಹೀಗಿರುವಾಗ ಜಾರಕಿಹೊಳಿ (SatishJarkiholi) ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶನ ಮಾಡಿದೆ ಎಂದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿಪಡೆ- ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದು ಅಭಿಯಾನ
ಹಿಂದೂ ಪದ ಅಶ್ಲೀಲ ಅಂತಾ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar) ಹಾಗೂ ಜಾರಕಿಹೊಳಿ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿಯೇ ಇಡೀ ದೇಶದಲ್ಲಿ ಹಿಂದೂಗಳು ಇವರನ್ನು ತುಳಿದಿದ್ದಾರೆ. ಇದೇ ರೀತಿ ಮಾತನಾಡಿದರೆ ಇನ್ನು ಪಕ್ಕಕ್ಕೆ ಹೋಗುತ್ತಾರೆ. ಮುಸ್ಲಿಮರ ಮತಕ್ಕಾಗಿ ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ. ಹಿಂದೂ ಎಂದರೆ ಒಂದು ಜೀವನ ಕಲೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾದರೆ ಸುಪ್ರೀಂ ಕೋರ್ಟ್ (Supreme Court) ಮೂರ್ಖ ಅಂತಾ ಹೇಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಬ್ಬ ಹಿಂದೂವಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾನೂ ಒಪ್ಪಲ್ಲ: ಡಿಕೆಶಿ
400 ವರ್ಷಗಳ ಹಿಂದೆಯೇ ಹಿಂದೂ ಶಬ್ದದ ಉಲ್ಲೇಖವಿದೆ. ಹಿಂದೂ ಧರ್ಮ ಒಡೆಯುವ, ಹಿಂದು ಧರ್ಮವನ್ನು ಕೆಟ್ಟದಾಗಿ ಬಿಂಬಿಸುವ ಜಾರಕಿಹೊಳಿ ಒಬ್ಬ ನಾಸ್ತಿಕ. ದೇವರು, ಧರ್ಮ ಇವರಿಗೆ ಬೇಕಿಲ್ಲ. ಕೇವಲ ಮತಗಳು ಮಾತ್ರ ಬೇಕಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.