ಹೈಕಮಾಂಡ್ ಹೇಳಿದ ಮೇಲೂ ಸಿಎಂ ಬದಲಾವಣೆ ಚರ್ಚೆ ಮಾಡೋದು ಸರಿಯಲ್ಲ: ಹರಿಪ್ರಸಾದ್

Public TV
1 Min Read
BK HARIPRASAD 3

ಬೆಂಗಳೂರು: ಹೈಕಮಾಂಡ್ ಹೇಳಿದ ಮೇಲೂ ಸಿಎಂ (Siddaramaiah) ಬದಲಾವಣೆ ಬಗ್ಗೆ ಮಾತನಾಡಿದರೆ ಹೈಕಮಾಂಡ್ ನಾಯಕರು ಅದರ ಬಗ್ಗೆ ತೀರ್ಮಾನ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ (BK Hariprasad) ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಬೇಕು ಎಂಬ ಕೆಲ ಶಾಸಕರ ಹೇಳಿಕೆ ವಿಚಾರಕ್ಕೆ ವಿಕಾಸಸೌಧದಲ್ಲಿ ಮಾತಾಡಿದ ಅವರು, ಶಾಸಕರು ಹೇಳಿರೋ ಬಗ್ಗೆ ನಾನೇನು ಕಾಮೆಂಟ್ ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಹೀಗಿದ್ದರೂ ಮಾತನಾಡುತ್ತಿದ್ದಾರೆ ಅಂದರೆ ನಾಯಕರೇ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನೇನು ಕಾಮೆಂಟ್ ಮಾಡಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

ಪಕ್ಷದ ಶಿಸ್ತು ಅನ್ನೋದು, ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್ ಅಂತ ಬರಲ್ಲ. ಅಶಿಸ್ತು ಅಂದ್ರೆ ಅಶಿಸ್ತೇ. ಯಾರೇ ಅಶಿಸ್ತು ತೋರಿಸಿದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಅಆಸಮಿತಿ ಅವರು ಯಾವುದು ಶಿಸ್ತು, ಯಾವುದು ಅಶಿಸ್ತು ಅಂತ ತೀರ್ಮಾನ ಮಾಡಬೇಕು. ಅದೇನು ದೊಡ್ಡ ವಿಚಾರ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

Share This Article