ಬೆಂಗಳೂರು: ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡುತ್ತೇವೆ, ಇಳಿಸುತ್ತೇವೆ ಎಂದರೆ ಅದು ನಡೆಯುವುದಿಲ್ಲ ಎಂದು ಸಹಕಾರ ಸಚಿವ ರಾಜಣ್ಣ ಗುಡುಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಜಾರಾಗಲು ಯಾರಾದರು ಅವರ ಆಸ್ತಿ ಬರೆಸಿಕೊಂಡಿದ್ದಾರೆಯೇ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ ಬೆನ್ನಲ್ಲೇ ಇಂದು ಪಬ್ಲಿಕ್ ಟಿವಿ ಅವರನ್ನು ಸಂದರ್ಶಿಸಿದೆ.
Advertisement
ಈ ಸಂದರ್ಶನದಲ್ಲಿ ರಾಜಣ್ಣ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ದಲಿತ ನಾಯಕರ ಸಭೆ ರದ್ದಾಗಿಲ್ಲ ಅದು ಮುಂದೂಡಿಕೆಯಾಗಿದೆ ಅಷ್ಟೇ. ಮುಂದೆ ನಾವು ಸಭೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರ ರಾಜ್ಯದ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡಿ – ಪವಿತ್ರಾ ಗೌಡ ಅರ್ಜಿ
Advertisement
Advertisement
ಸುರ್ಜೆವಾಲ ಅವರ ಸೂಚನೆ ಮೇರೆಗೆ ಪರಮೇಶ್ವರ್ ಸಭೆಯನ್ನು ಮುಂದೂಡಿದ್ದಾರೆ. ಈ ಹಿಂದೆ ಸಿಎಂ ಜೊತೆ ಊಟಕ್ಕೆ ಸೇರಿದ್ದರಿಂದ ಮಾಧ್ಯಮಗಳಲ್ಲಿ ಬೇರೆ ಬೇರೆ ವಿಶ್ಲೇಷಣೆ ಬಂತು. ಅದಕ್ಕೆ ನೀವು ಪ್ರತ್ಯೇಕ ಸಭೆ ಸೇರುವುದು ಬೇಡ ಎಂದಿದ್ದಾರೆ ಎಂದು ಹೇಳಿದರು.
Advertisement
ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಸಿಎಂ, ಡಿಕೆಶಿ ಒಬ್ಬರೇ ಡಿಸಿಎಂ ಆಗಿರುತ್ತಾರೆ ಎಂದರು. ಪಾರ್ಲಿಮೆಂಟ್ ಚುನಾವಣೆವರೆಗೆ ಅವರೇ ಕೆಪಿಸಿಸಿ ಅಧ್ಯಕ್ಷರು ಆಗಿ ಮುಂದುವರಿಯುತ್ತಾರೆ ಅಂದಿದ್ದರು. ಅದಕ್ಕೆ ನಾನು ಹೈ ಕಮಾಂಡ್ ನಾಯಕರ ಹೇಳಿಕೆಯನ್ನ ಹೇಳುತ್ತಿದ್ದೇನೆ. ಪಾರ್ಲಿಮೆಂಟ್ ಚುನಾವಣೆವರೆಗೆ ಅಧ್ಯಕ್ಷರು ಅಂತ ಹೇಳಿದ್ದು ನನಗೆ ನೆನಪಿದೆ ಎಂದರು.
ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರ ಎಲ್ಲಾ ಕಾಂಗ್ರೆಸ್ ಹೈ ಕಮಾಂಡ್‌ಗೆ ಬಿಟ್ಟಿದ್ದು. 5 ವರ್ಷದ ಅವಧಿಗೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರಲ್ಲ ಎಂದು ತಿಳಿಸಿದರು.