ಕೊಪ್ಪಳ: ಹೋದ ಕಡೆಯೆಲ್ಲಾ ಸಿದ್ದರಾಮಯ್ಯ (Siddaramaiah) ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಕೊಪ್ಪಳದ (Koppal) ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಹಾಕಿದವರಿಗೆ ತಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ, ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಹಳೇ ಮೈಸೂರು ಭಾಗದ ಮೇಲೆ ಕಣ್ಣು – ಕಾಂಗ್ರೆಸ್ ಸಭೆಯ ಇನ್‌ಸೈಡ್ ಸ್ಟೋರಿ
Advertisement
Advertisement
ಸಿದ್ದರಾಮಯ್ಯ ಹೆಸರು ಘೋಷಣೆ ಮಾಡಿದ್ದು ತಪ್ಪು ಎನ್ನುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ನಾನು ತಪ್ಪು ಎನ್ನಬೇಕು, ನೀವು ಅಲ್ಲಿ ಮತ್ತೇನಾದರೂ ತಿರುಚಿ ಕೇಳಬೇಕು. ಇದರಿಂದ ತಪ್ಪು ಸಂದೇಶ ಹೋಗುತ್ತದೆ ಎಂದರು. ಇದನ್ನೂ ಓದಿ: ಶಾರೀಕ್‌ಗಿಂತಲೂ ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್‌ಮೈಂಡ್ ಉಗ್ರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ
Advertisement
ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಈ ವಿಚಾರ ಒಂದು ರೀತಿ ವರ್ಷಕ್ಕೆ ಒಮ್ಮೆ ಮಳೆ ಬಂದ ಹಾಗೆ ಆಗುತ್ತಿದೆ. ಚುನಾವಣೆ ಬಂದಾಗೆಲ್ಲಾ ಗಡಿ ವಿವಾದ ಹುಟ್ಟಿಕೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ಕಿಡಿಕಾರಿದರು.