ಬೆಂಗಳೂರು: ಯತೀಂದ್ರ (Yathindra) ಅವರು ನಮ್ಮ ಮನೆಯಲ್ಲಿ ಇದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ YST ಟ್ಯಾಕ್ಸ್ ಜಾರಿಗೆ ಬಂದಿದೆ ಎಂಬ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಎಂಎಲ್ಎ ಆಗಿರಲಿಲ್ವಾ? ಯತೀಂದ್ರ ನಮ್ಮ ಮನೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಅವರ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಮನೆಯಲ್ಲೂ ಅವರ ಮಗ ಇದ್ದರು ಅಲ್ಲವೇ? ಅದನ್ನ ಏನು ಅಂತ ಕರೆಯೋದು? ಅವರ ಹೆಂಡತಿ MLA ಆಗಿದ್ರು. ಅವರ ಅಣ್ಣ ಮಂತ್ರಿ ಆಗಿದ್ರು, ಅವರ ತಂದೆ ಪ್ರಧಾನಿ ಆಗಿದ್ರು. ಅವರ ಅಣ್ಣನ ಮಕ್ಕಳು ಎಂಎಲ್ಎ ಆಗಿದ್ರು. ಅವರಿಗೆ ಏನಂತ ಕರಿಯಬೇಕು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
ಹೆಚ್‌ಡಿಕೆ ಹೇಳಿದ್ದೇನು?
ಇತ್ತೀಚೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ (YST Tax) ಶುರುವಾಗಿದೆ. ದೇಶದಲ್ಲಿ ಜಿಎಸ್‍ಟಿ ಟ್ಯಾಕ್ಸ್ ಇರುವ ಹಾಗೆ ಈ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ ನಡೆಯುತ್ತಿದೆ ಎಂದು ಬಾಂಬ್ ಸಿಡಿಸಿದ್ದರು.
ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ಸಹ ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ಟೀಕಿಸಿದ್ದರು. ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ವಸೂಲಿ ಮಾಡುವ ತೆರಿಗೆ ಕುರಿತು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ದೇವೇಗೌಡರ, ಕುಮಾರಸ್ವಾಮಿಯವರ ಜೊತೆಗೆ ಇದ್ದವರು. JDSನಲ್ಲಿ ಹಿಂದೆ ಇದ್ದವರು. ಹಾಗಾಗಿ ಸಿದ್ದರಾಮಯ್ಯ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ವೈಎಸ್‍ಟಿ ವಿಷಯ ತಿಳಿಸಿದ ಕುಮಾರಸ್ವಾಮಿಯವರಿಗೆ ಅಭಿನಂದನೆಗಳು ಟಾಂಗ್ ನೀಡಿದ್ದರು.
ಜೊತೆಗೆ ಸಿದ್ದರಾಮಯ್ಯ ಅವರು ಹಾಕಿದ ತೆರಿಗೆಯನ್ನ ಯತೀಂದ್ರ ಅವರು ವಸೂಲಿ ಮಾಡ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿಧೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ವೈಎಸ್‍ಟಿ, ವಿಎಸ್‍ಟಿ ಬಗ್ಗೆ ಜನರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದ್ದರು.
Web Stories