ಧಾರವಾಡ: ಪ್ರಾರ್ಥನಾ ಮಂದಿರಗಳ ಲೌಡ್ ಸ್ಪೀಕರ್‌ಗೆ (Loudspeaker) ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಈ ಕೂಡಲೇ ಅನುಮತಿ ವಾಪಸ್ ಪಡೆಯಬೇಕು. 15 ವರ್ಷಗಳ ಹಿಂದೆಯೇ ಧ್ವನಿವರ್ಧಕದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಹೇಳಿತ್ತು. ಹೋರಾಟ ಮಾಡಿ ಹೇಳಿದರೂ ಕ್ರಮ ಆಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್
Advertisement
ಧ್ವನಿವರ್ಧಕಗಳ ತೊಂದರೆ, ಕಿರಿಕಿರಿ ನಿಂತಿಲ್ಲ. ಈಗ ಯಾವ ಅನುಮತಿ? ಹೇಗೆ ಕೊಟ್ಟಿದ್ದೀರಿ? ಮೈಕ್ ಅವಶ್ಯಕತೆ ಇಲ್ಲವೇ ಇಲ್ಲ. ಕಾನೂನು ಉಲ್ಲಂಘಿಸಿ ಮಸೀದಿಗಳಲ್ಲಿ ಮೈಕ್ ಬಳಕೆ ಆಗುತ್ತಿದೆ. ಮಂದಿರದ ಶಬ್ದದಿಂದ ಯಾರಿಗೂ ತೊಂದರೆ ಇಲ್ಲ. ನಿತ್ಯ ಐದು ಬಾರಿ ಮಂದಿರಗಳಲ್ಲಿ ಪೂಜೆ ಇರುವುದಿಲ್ಲ. ತ್ರಿಕಾಲ ಪೂಜೆ ಇದ್ದರೂ ಮೈಕ್ ಇರುವುದಿಲ್ಲ. ಬೆಳಗ್ಗೆ 6ರ ನಂತರ ಸುಪ್ರಭಾತಕ್ಕೆ ಮಾತ್ರ ಧ್ವನಿವರ್ಧಕ ಇರುತ್ತೆ ಎಂದು ತಿಳಿಸಿದ್ದಾರೆ.
Advertisement
ಮಸೀದಿಗಳಲ್ಲಿ (Mosque) ಬೆಳಗ್ಗೆ 5ಕ್ಕೆ ಪ್ರಾರ್ಥನೆ ಪ್ರಾರಂಭ ಆಗುತ್ತದೆ. ಇದರಿಂದ ಆಸ್ಪತ್ರೆ, ಶಿಕ್ಷಣಕ್ಕೆ ತೊಂದರೆ ಆಗಿತ್ತು. ಆಗ ಜನ ಕೋರ್ಟ್‌ಗೆ ಹೋಗಿದ್ದರು. ಈಗ ಅನುಮತಿ ನೀಡಲಾಗಿದೆ ಅಂತಾ ಸರ್ಕಾರ ಹೇಳಿದೆ. ಒಂದೊಂದು ಮಸೀದಿಗೂ 4 ಧ್ವನಿವರ್ಧಕ ಇರುತ್ತವೆ. ಅವುಗಳಿಗೆಲ್ಲ ಅನುಮತಿ ಇರುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್
Advertisement
Advertisement
ಈ ಅನುಮತಿ ವಾಪಸ್ ಪಡೆಯಬೇಕು, ಇಲ್ಲವೇ ಉಳಿದೆಲ್ಲ ಸ್ಪೀಕರ್ ತೆಗೆಯಿಸಿ ಒಂದೇ ಇಡಬೇಕು. ಇದಕ್ಕಾಗಿ ವಿಶೇಷ ಪೊಲೀಸ ಪಡೆ ರಚಿಸಬೇಕು. ಇಲ್ಲದೇ ಹೋದಲ್ಲಿ ಇದೊಂದು ಕಣ್ಣೊರೆಸುವ ತಂತ್ರ ಆಗುತ್ತೆ. ಈ ನಾಟಕ ಸರ್ಕಾರ ನಿಲ್ಲಿಸಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.