ಹಾಸನ: ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರದವರು (State Government) ದೂರುವುದು ಸರಿಯಲ್ಲ. ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಪ್ರತಿಭಟನೆ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗಿದ್ದರೆ ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಸಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಕೇಂದ್ರದಿಂದ ಅನುದಾನ ಬಂದೇ ಇಲ್ಲ ಎಂಬ ಭಾವನೆ ಮೂಡಿಸುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ
Advertisement
Advertisement
ದಕ್ಷಿಣ ಭಾರತ ಪ್ರತ್ಯೇಕವಾಗಬೇಕು ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿ, ದೇಶ ಒಡೆಯುವ ಹೇಳಿಕೆ ಯಾರೂ ಕೊಡಬಾರದು. ಭಾರತ ಒಂದಾಗಿರುತ್ತದೆ. ಭಾರತೀಯರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪರಿಂದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಚಾಲನೆ
Advertisement
Advertisement
ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು? ದೇಗುಲ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕಿರುತ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೆ. ಕೇಸರಿ ಶಾಲು ಹಾಕಿರೋರು ಬಿಜೆಪಿ ಕಾರ್ಯಕರ್ತರು ಎನ್ನೋಕೆ ಆಗುತ್ತಾ. ಮಂಡ್ಯ ಪ್ರತಿಭಟನೆ ವೇಳೆ ಕುಮಾರಸ್ವಾಮಿಗೆ ಯಾರೋ ಕಾರ್ಯಕರ್ತ ಬಂದು ಕೇಸರಿ ಶಾಲು ಹಾಕಿದ್ದರು. ಇದಕ್ಕೆ ತಪ್ಪಾಗಿ ತಿಳಿಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸವದಿ ಹುಟ್ಟುಹಬ್ಬದ ಫ್ಲೆಕ್ಸ್‌ನಲ್ಲಿ ಕೈ ಚಿಹ್ನೆ ಮಾಯ!
ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಾತನಾಡಿ, ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ಕೊಡಲ್ಲ ಅಂತ ಹೇಳಿದೆ. ಆ ನಂತರ ಕೇಂದ್ರದ ಬಳಿ ಹೋಗಿದ್ದೇವೆ. ಮತ್ತೆರಡು ಮಾರ್ಗದ ಮೇಲ್ಸೇತುವೆಗಾಗಿ ಕೇಂದ್ರ ಸರ್ಕಾರದಲ್ಲಿ 48 ಕೋಟಿ ಅನುಮೋದನೆಗೆ ಹೋಗಿದೆ ಎಂದು ಹೇಳಿದರು. ಅದೇನು ಬಿಬಿಎಂಪಿ ಕೆಲಸ ಕೆಟ್ಟೋಯ್ತಾ, ಅದೇ ಚರಂಡಿಗೆ ಅದೇ ಕಲ್ಲು ಹಾಕೋಕೆ. ಹಣ ಕೊಡಿ ಎಂಬ ನಮ್ಮ ಮನವಿಗೆ, ಪತ್ರ ವ್ಯವಹಾರಕ್ಕೆ ನಾವು ಹಣ ಕೊಡಲು ಆಗಲ್ಲ ಎಂದು ಕಠಿಣವಾಗಿಯೇ ಉತ್ತರ ನೀಡಿದ್ದಾರೆ. ಸಹಕಾರವನ್ನೂ ಸಹ ಕೊಡಲ್ಲ ಎಂದಿದ್ದಾರೆ. ಅಲ್ಲಿಗೆ ಅದು ಮುಗಿದಿದೆ. ನಮಗೆ ರಾಜ್ಯ ಸರ್ಕಾರದಿಂದ ರೈಲ್ವೆ ಮೇಲ್ಸೇತುವೆಗೆ ಸಹಕಾರ ಬೇಕಾಗಿಲ್ಲ. ಮೂರು ಸಾರಿ ಕೊಡಲ್ಲ ಎಂದ ಮೇಲೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ