ಬೆಂಗಳೂರು / ಕೊಪ್ಪಳ: ವಿಭಿನ್ನವಾಗಿ ಮದುವೆ ಆಮಂತ್ರಣ ಮುದ್ರಿಸಲು ಅನೇಕರು ಪ್ಲಾನ್ ಮಾಡುತ್ತಲೇ ಇರುತ್ತಾರೆ. ಹಾಗೇ ಕೊಪ್ಪಳ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಮದುವೆಯ ಆಮಂತ್ರಣವನ್ನು ಎಟಿಎಂ ಕಾರ್ಡ್ ಮಾದರಿಯಲ್ಲಿ ಮುದ್ರಿಸಿ ಹಂಚುತ್ತಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲೂಕು ಹಾಬಲಕಟ್ಟಿ ಗ್ರಾಮದ ದುರ್ಗೇಶ್ ದೊಡ್ಡಮನಿ ಅವರ ವಿವಾಹ ಇದೇ 30ರಂದು ನಡೆಯಲಿದೆ. ಸಂಬಂಧಿಕರು, ಆಪ್ತರು ಹಾಗೂ ಸ್ನೇಹಿತರಿಗೆ ಎಟಿಎಂ ಕಾರ್ಡ್ ನಂತೆ ಕಾಣುವ ಮದುವೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಅದರಲ್ಲಿ ವಿವಾಹ ಸ್ಥಳ, ದಿನಾಂಕ ಎಲ್ಲವನ್ನೂ ಅಚ್ಚುಕಟ್ಟಾಗಿ ತಿಳಿಸಲಾಗಿದೆ. ಈ ಮದುವೆ ಕಾರ್ಡ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
Advertisement
ಈ ಬಗ್ಗೆ ಮದುಮಗ ದುರ್ಗೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಯಾದಗಿರಿ ಜಿಲ್ಲೆಯ ಶಾಹಾಪುರದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮದುವೆಗೂ ಮುನ್ನ ಇಂಟರ್ ನೆಟ್‍ನಲ್ಲಿ ಇಂತಹ ಕಾರ್ಡ್ ಗಳನ್ನು ನೋಡಿದ್ದೆ. ಹೀಗಾಗಿ ನಾನು ಹೀಗೆ ಆಮಂತ್ರಣ ಮುದ್ರಿಸಿ ಹಂಚಬೇಕು ಎನ್ನುವ ಪ್ಲಾನ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
Advertisement
ಕಾರ್ಡ್ ವಿಶೇಷತೆ ಏನು?:
ಎಟಿಎಂ ಕಾರ್ಡ್ ನಲ್ಲಿರುವ ಯಾವುದೇ ವಿಷಯವನ್ನು ಮದ್ವೆ ಕಾರ್ಡ್ ನಲ್ಲೂ ಕೈಬಿಟ್ಟಿಲ್ಲ. ಕಾರ್ಡ್ ನಲ್ಲಿರುವ ಮಾಹಿತಿಯನ್ನು ಮಾತ್ರ ಬದಲಾಯಿಸಿದ್ದಾರೆ. ವಿಸಾ ಕಾರ್ಡ್ ಹೆಸರಿನ ಜಾಗದಲ್ಲಿ ವಿವಾಹ ಎಂದು, 16 ಸಂಖ್ಯೆಯ ಕಾರ್ಡ್ ನಂಬರ್ ಬದಲಾಗಿ ವಿವಾಹ ದಿನಾಂಕ, ಸಮಯವನ್ನು ತಿಳಿಸಲಾಗಿದೆ.
Advertisement
ಕಾರ್ಡ್ ನ ಬಲ ಭಾಗದಲ್ಲಿ ನ್ಯೂಲೈಫ್ ಬ್ಯಾಂಕ್ ಅಂತ ಬರೆಯಲಾಗಿದೆ. ಅವಧಿ ಆರಂಭ (3-12-2018) ಹಾಗೂ ಮುಕ್ತಾಯ ಲೈಫ್ ಟೈಮ್. ನಿಮ್ಮ ಹಾಜರಿಕೊಟ್ಟು ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ. ಮದುವೆಗೆ ಬರದವರಿಗೆ ಯಾವುದೇ ಕ್ಷಮೆ ಇರುವುದಿಲ್ಲ ಎಂದು ತಿಳಿಸಿ ವಧು-ವರರು ಸಹಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com