ಬೆಂಗಳೂರು: ಪ್ರಧಾನಿ ಮೋದಿಯವರು ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತಮ್ಮ ಭಾಷಣದ ಆರಂಭದಲ್ಲಿ ಕನ್ನಡ ಮಾತಾಡುತ್ತಾರೆ. ಮೋದಿಯವರ ಕನ್ನಡ ಮಾತನಾಡುವುದನ್ನೇ ಎನ್‍ಕ್ಯಾಶ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ.
ಕೂಡಲ ಸಂಗಮ ಪದದ ಉಚ್ಚಾರಣೆಯನ್ನು ತಪ್ಪಾಗಿ ಉಚ್ಛರಿಸಿದಕ್ಕೆ ಸಿಎಂ ಸಿದ್ದರಾಮಯ್ಯ ನೇರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೂಡಲ ಸಂಗಮವನ್ನು ಕುಂಡಾಲಾ ಸಂಗಮ ಎಂದು ಬಸವಣ್ಣ ಮತ್ತು ಲಿಂಗಾಯತರಿಗೆ ಅಪಮಾನ ಮಾಡಿದ ಮೋದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
Advertisement
ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. “ಶ್ರೀ ನರೇಂದ್ರ ಮೋದಿ ಅವರೆ, ಇದು ಕೂಡಲ ಸಂಗಮ, ಕುಂಡಲ ಸಂಗಮವಲ್ಲ. ಕನ್ನಡ ಪದವನ್ನು ತಪ್ಪಾಗಿ ಉಚ್ಚರಿಸುವುದು ದೊಡ್ಡ ತಪ್ಪು. ಕನ್ನಡಿಗರು ಉದಾತ್ತ ಮನಸ್ಸಿನವರು. ಅವರು ನಿಮ್ಮನ್ನು ಕ್ಷಮಿಸುತ್ತಿದ್ದಾರೆ. ಆದರೆ ನೀವು ಕನ್ನಡಿಗರ ಮನಸ್ಸನ್ನು ಹೊಂದಿಲ್ಲ ಎಂದು ವಿಷಾದಿಸುತ್ತೇನೆ. ಇತರರ ಭಾಷಣ ಮಾಡುವಾಗ ನೀವು ನಗುವುದು” ಎಂದು ಟ್ವೀಟ್ ಮಾಡಿದ್ದಾರೆ.
Advertisement
Shri @narendramodi avare,
It is Kudala Sangama not Kundala Sangama.
Mis-pronouncing a Kannada word is not a big deal. Kannadigas are magnanimous: they forgive you.
But sad that you lack the heartedness of Kannadigas. You make speeches to laugh at others’ pronunciation. pic.twitter.com/Ko0WuqIVQj
— Siddaramaiah (@siddaramaiah) May 7, 2018