ವಿಜಯಪುರ: ಜವಾಹರಲಾಲ್ ನೆಹರೂ ಅವರಿಂದಲೇ ಆರ್‌ಎಸ್‌ಎಸ್ ನಿಷೇಧ ಮಾಡೋಕೆ ಆಗಲಿಲ್ಲ. ಇನ್ನು ಪ್ರಿಯಾಂಕ್ ಖರ್ಗೆಯಿಂದ ಸಾಧ್ಯನಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಗುಡುಗಿದರು.
ಖರ್ಗೆ ಯಾವ ದಲಿತರನ್ನ ಉದ್ದಾರ ಮಾಡಿದ್ದಾರೆ ತೋರಿಸಲಿ. ಇವರು ಅಂಬೇಡ್ಕರ್ ಅನುಯಾಯಿ ಅಲ್ಲ. ಸೋನಿಯಾ ಗಾಂಧಿ ಅನುಯಾಯಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ – ರಾಜಶೇಖರ ಹಿಟ್ನಾಳ್
ನಮ್ಮ ತಂಡದವರಿಗೆ ಪಕ್ಷದಲ್ಲಿ ಸ್ಥಾನ ನೀಡಿದರೆ ನನಗೆ ಸಂತೋಷ. ಮೊದಲು ನಮ್ಮ ತಂಡದವರು ಒಳಗೆ ಹೋಗಲಿ. ಆ ಬಳಿಕ ಯತ್ನಾಳ್ ವಾಪಸ್ ಕರೆತರುವ ಬಗ್ಗೆ ಅವರೇ ಮಾತಾಡ್ತಾರೆ ಎಂದು ಯತ್ನಾಳ್ ಟೀಂ ಒಡೆಯಲು ಯತ್ನಾಳ್ ಟೀಂಗೆ ಪಕ್ಷದಲ್ಲಿ ಹುದ್ದೆ ನೀಡುವ ಬಗ್ಗೆ ಬಿಜೆಪಿ ನಾಯಕರ ಚಿಂತನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ನಾನು ಈ ಹಿಂದೆ ಕೋರ್ ಕಮಿಟಿ ಸದಸ್ಯನಾಗಿದ್ದೆ. ಆ ಸಮಯದಲ್ಲಿ ಟಿಕೆಟ್ ವಂಚಿತರ ಪರವಾಗಿ ಸಭೆಯಲ್ಲಿ ವಾದ ಮಾಡಿದ್ದೆ. ಅದೇ ರೀತಿ ಈಗಲೂ ಮೊದಲು ನಮ್ಮ ತಂಡದವರು ಒಳಗೆ ಕಾಲಿಡಲಿ. ಆ ಬಳಿಕ ಅವರೇ ನನ್ನನ್ನು ವಾಪಸ್ ಕರೆಸುವ ಬಗ್ಗೆ ಸಭೆಯಲ್ಲಿ ಮಾತಾಡ್ತಾರೆ. ನಮ್ಮ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: I Stand By My Words, ಡಿಕೆಶಿಗೂ ಅವಕಾಶ ಸಿಗಲಿ – ಇಕ್ಬಾಲ್ ಹುಸೇನ್