ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್‌.ಡಿ.ದೇವೇಗೌಡ

Public TV
2 Min Read
h.d.devegowda

ಹಾಸನ: ದೇಶದ ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿರುವ ಕಾಂಗ್ರೆಸ್, ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಭವಿಷ್ಯ ನುಡಿದರು.

ಹಾಸನದ ನಾಗರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್‌ನವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 28 ಗ್ಯಾರೆಂಟಿಗಳನ್ನು ದೇಶದಲ್ಲಿ ಜಾರಿಗೆ ತರ್ತೀವಿ ಅಂತ ಹೇಳಿದ್ದಾರೆ. ಮೂವತ್ತು ಲಕ್ಷ ಜನಕ್ಕೆ ಕೆಲಸ ಕೊಡ್ತೀವಿ ಎಂದಿದ್ದಾರೆ. ಆದರೆ ದೇಶದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಅವರ ಅಧಿಕಾರ ಇದೆ. ಇಂಥವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು ತಂದಿದ್ದೇವೆ: ಡಿಕೆಶಿ

telangana congress guarantee

ಎಲ್ಲಾ ರೀತಿಯ ಸಾಲಮನ್ನಾ ಮಾಡ್ತೀವಿ ಎಂದಿದ್ದಾರೆ. ಮೋದಿ ಅವರಿಂದ ಹೆಣ್ಣುಮಕ್ಕಳಿಗೆ 33 ಪರ್ಸೆಂಟ್ ಮೀಸಲಾತಿ ಮಸೂದೆ ಪಾಸ್ ಆಯ್ತು. ಇದನ್ನು ನಾನು ಮಾಡಿದ್ದು. ಅದನ್ನು ಪಾಸ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಸುಳ್ಳು ಹೇಳಿ ಜನರಿಗೆ ಮೋಸ ಮಾಡಲು ಸಾಧ್ಯನಾ? ಎಲ್ಲಾ ಸಾಲ ಮನ್ನಾ ಮಾಡಲು ಎಲ್ಲಿದೆ ಬಜೆಟ್? ಕೇಂದ್ರದ ಬಜೆಟ್‌ನ ನಾಲ್ಕು ಪಟ್ಟು ಭರವಸೆ ಪ್ರಣಾಳಿಕೆಯಲ್ಲಿದ್ದು, ಈಡೇರಿಸಲು ಅಷ್ಟು ಹಣ ಕೂಡಿಸುವುದು ಹೇಗೆ ಎಂದು ಕೇಳಿದರು.

ಎಂಟು ಸಾವಿರ ಕೋಟಿ ಮನೆ ಕಟ್ಟಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದೀರಾ? ಮನಮೋಹನ್‌ ಸಿಂಗ್ ಪಿಎಂ ಆದಾಗ ಎಷ್ಟು ಹಗರಣ ಆಯ್ತು ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿ, ಇದು ಸತ್ಯಕ್ಕೆ ದೂರವಾದ ಪ್ರಣಾಳಿಕೆ. ಇದರಿಂದ ನಿಮಗೆ ಏನೇನು ಆಗಲ್ಲ. ಇದರಿಂದ ನೀವು ಯಾವ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ಪ್ರಣಾಳಿಕೆಯನ್ನು ಜನ ಓದ್ತಾರೆ. ಆದರೆ ನಂಬಲ್ಲ ಎಂದು ‘ಕೈ’ ನಾಯಕರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಹೇಳಿಕೆ – ಕಾಂಗ್ರೆಸ್‌ನಿಂದ ಯತ್ನಾಳ್ ವಿರುದ್ಧ ದೂರು

narendra modi congress

ಮೊನ್ನೆ ಮೋದಿಯವರ ಬಳಿ ಕೊಬ್ಬರಿ ಬೆಲೆ ಬಿದ್ದು ಹೋಯ್ತು ಅಂದೆ. ಅವರು ನನ್ನನ್ನು ತಬ್ಬಿಕೊಂಡು ಕೂರಿಸಿದರು. ಕೂಡಲೇ ಕೊಬ್ಬರಿ ಖರೀದಿಗೆ ಆದೇಶ ನೀಡಿದರು. ನಮಗೆ ರೈತರ ಬಗ್ಗೆ ಆಸಕ್ತಿ ಇಲ್ವಾ ಎಂದು ಶಿವಲಿಂಗೇಗೌಡ ವಿರುದ್ಧ ಗರಂ ಆದರು.

ಅರಸೀಕೆರೆಗೆ ಪೈಪ್‌ಲೈನ್ ಹಾಕಿ ನೀರು ಕೊಟ್ಟವನು ನಿಮ್ಮ ಮುಂದೆ ಕೂತಿದ್ದೇನೆ, ಸತ್ತಿಲ್ಲ. ಈಗ ಎತ್ತಿನಹೊಳೆ ಮಾಡಲು ಹೋಗಿದ್ದಾರೆ. ಅದನ್ನು ಮೊದಲು ಮಾಡಿದವರು ಜಗದೀಶ್ ಶೆಟ್ಟರ್, ಬಿಜೆಪಿಯವರು. ಸುಳ್ಳಿನ ಸರಮಾಲೆಯಿಂದ ಜನರಿಗೆ ಮೋಸ ಮಾಡಬೇಡಿ. ಮುಷ್ಠಿಯಿಂದ ಜನರು ಇವರಿಗೆ ಬುದ್ಧಿ ಕಲಿಸುತ್ತಾರೆ ಶಿವಲಿಂಗೇಗೌಡರ ಹೆಸರು ಹೇಳದೆಯೇ ಟಾಂಗ್‌ ಕೊಟ್ಟರು.

Share This Article