ಬಳ್ಳಾರಿ: ಕಳೆದ ಹದಿನಾಲ್ಕು ತಿಂಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ಆದರೂ ಪದೇ ಪದೇ ಅಧಿಕಾರಿಗಳು ಕಿರುಕುಳ ಕೊಡ್ತಾ ಇದ್ದಾರೆ. ತಾಯಿ ಮತ್ತೆ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ. ಬಳ್ಳಾರಿಯಲ್ಲಿ ನಾನು ಬದುಕಿದ್ದರೆ ಸಾಕು ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದರು.
Advertisement
ಬಳ್ಳಾರಿಗೆ ಆಮಿಸಿ ಕನಕ ದುರ್ಗಮ್ಮ ದೇವಸ್ಥಾನದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳ ಕಾಲ ಕಾದು ನೋಡಿ. ನಾನೇ ಬಳ್ಳಾರಿಯಲ್ಲಿ ಇರಲು ಕೋರ್ಟ್ (Court) ಗೆ ಅನುಮತಿ ಕೇಳಿರುವೆ. ಕಳೆದ 12 ವರ್ಷಗಳಿಂದ ನನ್ನ ಮೇಲಿನ ಕೇಸ್ ನಡೆಯುತ್ತಿವೆ. ಹೀಗಾಗಿ ಪ್ರತಿದಿನ ಕೇಸ್ ನಡೆಸುವಂತೆ ನಾ ಕೋರ್ಟ್ ಗೆ ಮನವಿ ಮಾಡಿರುವೆ. ಆದರೆ ಕೇಸ್ ನಡೆಯುವಾಗ ನಾನು ಬಳ್ಳಾರಿಯಲ್ಲಿ ಇರಬಾರದು ಎಂದು ಸಿಬಿಐ (CBI) ನವರು ಮನವಿ ಮಾಡಿದ್ದಾರೆ. ಹೀಗಾಗಿ ನಾನು ಮಗಳ ಹೆರಿಗೆ ಆಗಿದೆ ಅದಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವೆ. ಸಿಬಿಐ ಅರ್ಜಿ ಸಲ್ಲಿಕೆ ಮಾಡಿದ ಕಾರಣ ನಾ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿರುವೆ ಎಂದು ತಿಳಿಸಿದರು. ಇದನ್ನೂ ಓದಿ: ಜಡಿ ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ- ಇದು ಸುದ್ದಿಯೇ ಅಲ್ಲ ಅಂದ್ರು ರಮ್ಯಾ!
Advertisement
Advertisement
ಸಿಬಿಐ ಅಧಿಕಾರಿಗಳ ಮೇಲೆ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ ಅವರು, ಒಂದು ತಪ್ಪು ಕೇಸನ್ನ ನನ್ನ ಮೇಲೆ ಹಾಕಿದ್ದಾರೆ. ಹೀಗಾಗಿ ಕೇಸ್ ನಲ್ಲಿ ಸೋಲುವ ಭಯಕ್ಕೆ ಕೇಸನ್ನ ನಡೆಸೋದಕ್ಕೆ ಹಿಂದೇಟು ಹಾಕಿ ವಿಳಂಬ ಮಾಡ್ತಾ ಇದ್ದಾರೆ. ಸುಪ್ರೀಂ ಕೊರ್ಟ್ ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೆ. ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸೋದಾಗಿ ಬೇಡಿಕೊಂಡಿದ್ದೆ. ಹೀಗಾಗಿ ಇವತ್ತು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆದಾಗಲಿ ಅಂತಾ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್ ಎಂದಿದ್ದ ಕೃಷಿ ಸಚಿವ ರಾಜೀನಾಮೆ
Advertisement
ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷವಾಯ್ತು. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರೋದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೊರ್ಟ್ ಗೆ ಕೇಳಿದ್ದೇನೆ. ಶಿಘ್ರದಲ್ಲೇ ಮೂರ್ನಾಲ್ಕು ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಾನು ಬಳ್ಳಾರಿ ಗಾಳಿ ನಾನು ಸೇವಿಸಬೇಕು ಎಂದರು.
ಇದೇ ವೇಳೆ ಪರೋಕ್ಷವಾಗಿ ರಾಜಕೀಯ (Politics) ಕ್ಕೆ ಬರುವ ಸುಳಿವು ನೀಡಿದ ರೆಡ್ಡಿ, ಈ ತಾಯಿ ಮತ್ತೆ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ. ಮಗಳ ಮದುವೆ ಆಯ್ತು, ಇಬ್ಬರು ಮೊಮ್ಮಕಳಾದ್ರು, ಮಗ ಡಿಗ್ರಿ ಮುಗಿಸಿಕೊಂಡಿದ್ದಾನೆ. ಅವನಿಗೆ ಚಿತ್ರರಂಗದಲ್ಲಿ ಇಂಟ್ರೆಸ್ಟ್ ಇದೆ, ಅದರಲ್ಲಿ ಬದುಕು ಕಂಡುಕೊಂಡಿದ್ದಾನೆ. ನನ್ನ ವಿಚಾರದಲ್ಲಿ ತಾಯಿ ದುರ್ಗಾಮಾತೆ ಒಳ್ಳೆ ದಾರಿ ತೋರಿಸ್ತಾಳೆ. ದೇವಸ್ಥಾನದಲ್ಲಿ ನನಗೆ ರಾಜಕೀಯ ಮಾತಾಡಲು ಇಷ್ಟ ಇಲ್ಲ. ಆ ತಾಯಿ ಏನು ದಾರಿ ತೋರುಸ್ತಾಳೋ ಹಾಗೆ ಮಾಡುವೆ. ಸಾರ್ವಜನಿಕವಾಗಿ ನಾವು ಬದುಕಬೇಕು ಅಂದ್ರೆ ನಾವು ಎರಡು ಮಾರ್ಗದಲ್ಲಿ ಬದುಕಬಹುದು. ನಾನು ಕೊರ್ಟ್ ನಲ್ಲಿರುವ ಪ್ರಕರಣಗಳನ್ನ ಹೆಚ್ಚು ಮಾತಾಡಲ್ಲ. ನಾನು ಬಳ್ಳಾರಿಲ್ಲೇ ಇದ್ದೇನೆ ನಿಮಿಗೆ ಕಾಣಿಸ್ತಾ ಇಲ್ಲ ಎಂದು ಹೇಳಿದರು.