ನವದೆಹಲಿ: ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ಇಂತಹ ಯಾವುದೇ ಸನ್ನಿವೇಶ ಎದುರಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಕಪ್ ಬಳಿಕ ನಾನು ಹಲವು ಸಮಾರಂಭದಲ್ಲಿ ಭಾಗವಹಿಸಿದ್ದೆ. ಎಲ್ಲ ಕಡೆಯಿಂದಲೂ ತಂಡದ ಪ್ರದರ್ಶನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತಿತ್ತು. ಆದರೆ ಇಲ್ಲಿಗೆ ಬಂದ ತಕ್ಷಣ ಇಂತಹ ವರದಿಗಳು ಕೇಳಿ ಬಂದಿದ್ದು ಅಚ್ಚರಿಯಾಗಿತ್ತು. ಉತ್ತಮ ಪ್ರದರ್ಶನಗಳ ಹೊರತುಪಡಿಸಿ ತಮ್ಮದೇ ಊಹೆಗಳನ್ನು ಹರಿಬಿಟ್ಟಿದ್ದಾರೆ ಎಂದರು.
Advertisement
It is baffling to read (reports of an alleged rift). We are feeding off lies, overlooking facts & turning a blind eye to all the good things that have happened. It is disrespectful: @imVkohli pic.twitter.com/gl9oPm8veE
— BCCI (@BCCI) July 29, 2019
Advertisement
ನನ್ನ ಪ್ರಕಾರ ಇಂತಹ ಸುದ್ದಿಗಳು ನಮ್ಮ ನಡುವಿನ ಆತ್ಮೀಯತೆಯನ್ನ ಭಂಗಗೊಳಿಸುವಂತಹ ಪ್ರಯತ್ನ ಎಂದು ನನಗೆ ಅನ್ನಿಸುತ್ತಿದೆ. ಇಲ್ಲಿ ಸುಳ್ಳನ್ನು ತಿನ್ನಲಾಗುತ್ತಿದೆ. ಈ ರೀತಿಯ ಸುದ್ದಿಗಳನ್ನು ಓದಲು ನಿಜವಾಗಿಯೂ ಕಷ್ಟ ಆಗುತ್ತದೆ. ಇಂತಹ ಸುದ್ದಿ ಹರಿಬಿಡುವುದರಿಂದ ಯಾರಿಗೆ ಲಾಭ ಆಗಲಿದೆ ಎಂಬುವುದು ನನಗಂತು ಗೊತ್ತಿಲ್ಲ. ಆದರೆ ಇಂತಹ ಸುಳ್ಳು ಸುದ್ದಿಗಳು ಪದೇ ಪದೇ ನಮ್ಮ ಸುತ್ತಲೂ ಹರಿದಾಡುತ್ತಿದ್ದಾರೆ ತಂಡದ ನಾಯಕ, ಕೋಚ್, ಆಟಗಾರರಾಗಿ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಯಾರು ಇಂತಹ ಸುದ್ದಿಗಳನ್ನು ಮಾಡುತ್ತಾರೋ ಅವರೇ ಬಂದು ನೋಡಿ. ಡ್ರೆಸ್ಸಿಂಗ್ ರೂಮ್‍ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಾದರೆ ನೀವೇ ಬಂದು ನೋಡಿ. ತಂಡದ ನಾಯಕರ ಹೇಗೆ ಆಟಗಾರರೊಂದಿಗೆ ಮಾತನಾಡುತ್ತಾರೆ. ಹಿರಿಯ ಆಟಗಾರರು ಕಿರಿಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುವುದನ್ನು ವಿಡಿಯೋ ಮಾಡಿಕೊಳ್ಳಿ ಎಂದರು. ಅಲ್ಲದೇ ಇಂತಹ ಸುದ್ದಿಗಳು ಆಟಗಾರರಿಗೆ ತೋರುವ ಅಗೌರವವಾಗಿದೆ. ನನ್ನ ಹಾಗೂ ರೋಹಿತ್ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾನು 11 ವರ್ಷ, ರೋಹಿತ್ 10 ವರ್ಷಗಳಿಂದ ತಂಡದಲ್ಲಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದ ಸಂದರ್ಭದಲ್ಲಿ ನಾಯಕನಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಎಂದರು.
Advertisement
Virat Kohli on reports of rift with Rohit Sharma: I too have heard.Dressing room atmosphere is important to succeed, if this was true, we would not have performed well. pic.twitter.com/4d59X2QkiD
— ANI (@ANI) July 29, 2019
ಕೊಹ್ಲಿ ತಂಡದೊಂದಿಗೆ ವೆಸ್ಟ್ ಇಂಡೀಸ್ ಟೂರ್ನಿಗೆ ಪ್ರಯಾಣ ಬೆಳೆಸಲಿದ್ದು, ಕೋಚ್ ರವಿಶಾಸ್ತ್ರಿ ತಂಡದೊಂದಿಗೆ ತೆರಳುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಗಸ್ಟ್ 3 ರಿಂದ ಟಿ20 ಪಂದ್ಯಗಳು ನಡೆಲಿದೆ.
ಕೆಲ ಸಮಯದ ಹಿಂದೆ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅವರನ್ನ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದರು. ಆ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಕೂಡ ಅನ್ ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಾಕಿದ್ದ ಸ್ಟೇಟಸ್ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅನುಷ್ಕಾ ಕೂಡ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾರನ್ನು ಅನ್ ಫಾಲೋ ಮಾಡಿದ್ದರು. ಈ ವರದಿಗಳ ನಡುವೆಯೇ ವೆಸ್ಟ್ ಇಂಡೀಸ್ ಟೂರ್ನಿಗೂ ಮೊದಲು ನಡೆಯ ಬೇಕಿದ್ದ ಪತ್ರಿಕಾಗೋಷ್ಠಿಯನ್ನ ರದ್ದು ಪಡಿಸಲಾಗಿದೆ ಎಂದಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ ವಿದೇಶಿ ಸರಣಿಯ ಪ್ರವಾಸ ಆರಂಭಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ಭಾನುವಾರ ಮಾಹಿತಿ ನೀಡಿತ್ತು.
Virat Kohli: If I don’t like a person then you will see it on my face or in my behaviour, that is how simple it is.I have always praised Rohit because I believe he is that good.We have no issues. It is kind of baffling, don’t know who is benefiting from all of this (rift reports) pic.twitter.com/kVPS3Q7huQ
— ANI (@ANI) July 29, 2019