– ಪ್ರಜ್ವಲ್ ರೇವಣ್ಣ ವೀಡಿಯೋ ರಿಲೀಸ್‌ನಲ್ಲಿ ಬಿಜೆಪಿ ನಾಯಕರ ಕೈವಾಡ ಇದೆ
ಬೆಂಗಳೂರು: ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ. ಈ ವೀಡಿಯೋ 2-3 ತಿಂಗಳ ಹಿಂದೆಯೇ ಬಿಡುಗಡೆ ಆಗಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದರು.
Advertisement
ನಗರದಲ್ಲಿ ಮಾತನಾಡಿದ ಅವರು, ಸ್ಟೇಡಿಯಂ ಬಳಿಯೂ ಪೆನ್‌ಡ್ರೈವ್ ಸಿಕ್ಕಿದೆ. 25 ಸಾವಿರ ಪೆನ್‌ಡ್ರೈವ್ ಅಂದರೆ ಉದ್ದೇಶ ಪೂರ್ವಕವಾಗಿಯೇ ವೀಡಿಯೋ ಬಿಡುಗಡೆ ಆಗಿರುತ್ತದೆ. ಆದರೆ ಮೊದಲು ವೀಡಿಯೋದಲ್ಲಿ ಇರುವ ವ್ಯಕ್ತಿಯ ಮೇಲಿನ ಕೇಸ್ ನಾವು ಫೋಕಸ್ ಮಾಡಬೇಕು. ಅದಾದ ಬಳಿಕ ವೀಡಿಯೋ ವೈರಲ್ ಮಾಡಿರೋರ ಕೇಸ್ ಕೂಡಾ ಗೊತ್ತಾಗುತ್ತದೆ. ವೀಡಿಯೋ ಯಾರೇ ಬಿಡುಗಡೆ ಮಾಡಿದರೂ ಅದು ತಪ್ಪೇ ಎಂದರು. ಇದನ್ನೂ ಓದಿ: ಕ್ಲೀನ್ ಚಿಟ್ ಕೊಡೋಕೆ ಪ್ರಜ್ವಲ್ ಕೇಸನ್ನ ಸಿಬಿಐಗೆ ವಹಿಸಬೇಕಾ: ಎಂ.ಬಿ.ಪಾಟೀಲ್ ಪ್ರಶ್ನೆ
Advertisement
Advertisement
ಪ್ರಜ್ವಲ್ ರೇವಣ್ಣ ವೀಡಿಯೋ ರಿಲೀಸ್‌ನಲ್ಲಿ ಬಿಜೆಪಿ ನಾಯಕರ ಕೈವಾಡ ಇದೆ. ಇದನ್ನ ದೇವರಾಜೇಗೌಡರೇ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಹೀನಾಯ ಕೃತ್ಯ ಮಾಡಿದ್ದು, ವೀಡಿಯೋ ಮಾಡಿದ್ದು ಪ್ರಜ್ವಲ್. ವಿಡಿಯೋ ಕದ್ದಿದ್ದು ಡ್ರೈವರ್. ಕದ್ದ ವಿಡಿಯೋ ಕೊಟ್ಡಿದ್ದು ಬಿಜೆಪಿ ನಾಯಕ ದೇವರಾಜೇಗೌಡ. ವೀಡಿಯೋ ಕೊಟ್ಟಿದ್ದ ಬಿಜೆಪಿ ನಾಯಕನಿಗೆ. ಇದರಲ್ಲಿ ಕಾಂಗ್ರೆಸ್ ಕೈವಾಡ ಎಲ್ಲಿದೆ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೈವಾಡ ಎಲ್ಲಿದೆ ಎಂದು ಪ್ರಶ್ನಿಸಿದರು.
Advertisement
ಬಿಜೆಪಿ-ಜೆಡಿಎಸ್ ಅವರು ಪೆನ್‌ಡ್ರೈವ್ ಹಂಚಿದ್ದರ ಬಗ್ಗೆ ಮಾತ್ರ ಮಾತಾಡ್ತಿದ್ದಾರೆ. ಮನೆ ಮಗ ಇಂತಹ ಘಟನೆ ಮಾಡಿದ್ದಾನೆ ಅಂತ ಯಾರು ಮಾತಾಡ್ತಿಲ್ಲ. ಆಡಿಯೋದಲ್ಲಿ ನಾನು ಕೇಳಿದೆ. ಇದರಲ್ಲಿ ಬಿಜೆಪಿ ವರಿಷ್ಠರಿಗೆ ಎಲ್ಲ ಗೊತ್ತಿತ್ತು ಅಂತ ಹೇಳಿದ್ದಾರೆ. ಎಲ್ಲಾ ಗೊತ್ತಿದ್ದರೂ ಯಾಕೆ ಟಿಕೆಟ್ ಕೊಟ್ಟರು. ಮಾಜಿ ಪ್ರಧಾನಿ ಕ್ಷೇತ್ರದಲ್ಲಿ ಚರ್ಚೆ ಆಗದೇ ಟಿಕೆಟ್ ಕೊಟ್ರಾ? ಯಾರು ದಾರಿ ತಪ್ಪಿದ ಮಗನ ಬಗ್ಗೆ ಮಾತಾಡ್ತಿಲ್ಲ. ಯಾಕೆ ಟಿಕೆಟ್ ಕೊಟ್ರಿ ಅಂತ ಹೇಳ್ತಿಲ್ಲ. ಯಾಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ನೇಣಿಗೆ ಹಾಕ್ತಿದ್ದೀರಾ? ಎಲ್ಲ ಗೊತ್ತಿದ್ದರು ಯಾಕೆ ಟಿಕೆಟ್ ಕೊಟ್ಟಿದ್ರಿ. ಇದರ ಹಿಂದಿನ ಸಂಚು ಏನು ಎಂದು ಕೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತೆ: ಬಿಎಸ್‌ವೈ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಲಾಕ್ ಮಾಡಿ, ಸಿಬಿಐ ಕೇಸ್ ಕೊಟ್ಟು ಅರೆಸ್ಟ್ ಮಾಡೊ ಪ್ಲ್ಯಾನ್ ಮಾಡಿದ್ರಾ? ಕುಮಾರಸ್ವಾಮಿ ಅವರು ಇದಕ್ಕೆ ಉತ್ತರ ಕೊಡಬೇಕು. ಯಾಕೆ ವಿಜಯೇಂದ್ರ, ಅಶೋಕ್ ಇದರ ಬಗ್ಗೆ ಮಾತಾಡ್ತಿಲ್ಲ. ಹುಬ್ಬಳ್ಳಿ ಕೇಸ್‌ನಲ್ಲಿ ತೋರಿಸಿದ್ದ ಮಹತ್ವ ಈ ಕೇಸ್‌ನಲ್ಲಿ ಯಾಕೆ ತೋರಿಸ್ತಿಲ್ಲ. ಯಾಕೆ ಇದೂವರೆಗೂ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿಲ್ಲ? ಕೇಂದ್ರ ಸರ್ಕಾರವೇ ಪಾಸ್‌ಪೋರ್ಟ್ ರದ್ದು ಮಾಡಿ ಅಂತಾ ಕ್ರಮ ತೆಗೆದುಕೊಳ್ಳಬಹುದು ಅಲ್ಲವಾ? ಈ ಕೇಸ್‌ನಲ್ಲಿ ಕೇಂದ್ರ ಸರ್ಕಾರ ಏನ್ ಮಾಡ್ತಿದೆ. ಅವರು ಹಾಲಿ ಎಂಪಿ. ಕೇಂದ್ರ ಸರ್ಕಾರ ಏನ್ ಕ್ರಮ ಮಾಡ್ತಿದೆ ಹೇಳಲಿ. ಕೇವಲ ಪೇಪರ್ ಹೇಳಿಕೆ ಕೊಟ್ರೆ ಸಾಕಾ? ನಮ್ಮ ಮೇಲೆ ಗೂಬೆ ಕೂರಿಸೋದು ಬಿಟ್ಟು ಯಾವಾಗ ಕ್ರಮ ಮಾಡ್ತೀರಾ ಅಂತ ಕೇಂದ್ರದ ವಿರುದ್ಧ ಕಿಡಿಕಾರಿದರು.
ಎಸ್‌ಐಟಿಯಿಂದ ಸಂತ್ರಸ್ತರ ಮೇಲೆ ಒತ್ತಡ ಹಾಕ್ತಿರೋ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಐಟಿ ಅವರು ಸಂತ್ರಸ್ತರಿಗೆ ಕಾನ್ಫಿಡೆನ್ಸ್ ಬಿಲ್ಡ್ ಮಾಡಬೇಕು. ಈ ಕೆಲಸ ಎಸ್‌ಐಟಿ ಮಾಡ್ತಿದೆ. ಸಿಬಿಐಗೆ ಒಪ್ಪಿಸೋಕೆ ಯಾಕೆ ಆತುರ. ಮೊದಲು ಪ್ರಾಥಮಿಕ ತನಿಖೆ ಆಗಲಿ. ಪರೇಸ್ ಮೆಸ್ತಾ ಕೇಸ್, ಡಿಎಸ್ಪಿ ಗಣಪತಿ ಕೇಸ್‌ನಲ್ಲಿ ಏನ್ ಆಯ್ತು ನಾವು ಕೊಟ್ಟ ತನಿಖೆಯೇ ಅವರು ಒಪ್ಪಿರೋದು. ಮೊದಲು ಪ್ರಾಥಮಿಕ ತನಿಖೆ ಮಾಹಿತಿ ಬರಲಿ. ಯಾಕೆ ಸಿಬಿಐ ತನಿಖೆ ಕೊಡಬೇಕು. ಯಾಕೆ ಕೇಸ್ ಮುಚ್ಚಿ ಹಾಕೋಕಾ? ಜೆಡಿಎಸ್ ಬಳಿ ಏನಾದ್ರು ದಾಖಲೆ ಇದ್ದರೆ ಕೊಡಲಿ. ಜೆಡಿಎಸ್ ಅವರು ಪ್ರಜ್ವಲ್ ಪರ ಮಾತಾಡ್ತಿದ್ದಾರೆ. ಪ್ರಜ್ವಲ್‌ಗೆ ಶಿಕ್ಷೆ ಆಗಬೇಕು ಅಂತಾ ಮಾತಾಡ್ತಿಲ್ಲ. ಕೇಸ್ ದಿಕ್ಕು ತಪ್ಪಿಸೋ ಕೆಲಸ ಮಾಡೋದು ಬೇಡ ಎಂದರು.
ದೇವರಾಜೇಗೌಡರನ್ನ ದೂರಿನ ಮೇಲೆ ಅರೆಸ್ಟ್ ಮಾಡಿದ್ದಾರೆ. ದೇವರಾಜೇಗೌಡ ಅವರೇ ಬಿಜೆಪಿ ನಾಯಕರ ಹೆಸರು ಹೇಳಿರೋದು. ಸಿಟಿ ರವಿ, ವಿಜಯೇಂದ್ರ ಬಳಿ ಆಡಿಯೋ ಇದ್ದರೆ ಸುದ್ದಿಗೋಷ್ಠಿ ಮಾಡಿ ಬಿಡುಗಡೆ ಮಾಡಲಿ. ಏನೇ ಮಾಹಿತಿ ಇದ್ದರೂ ಕೊಡಲಿ. ದೇವರಾಜೇಗೌಡ ಬಂಧನ ರಾಜಕೀಯ ಉದ್ದೇಶಕ್ಕೆ ಅಲ್ಲ. ಅತ್ಯಾಚಾರ ಕೇಸ್ ಬಂದಿತ್ತು. ಅರೆಸ್ಟ್ ಮಾಡಿರೋದು. ಈ ಕೇಸ್‌ನಲ್ಲೂ ಅರೆಸ್ಟ್ ಮಾಡಬಾರದಾ ಎಂದು ಬಂಧನ ಸಮರ್ಥನೆ ಮಾಡಿಕೊಂಡರು.
ವಿಡಿಯೋ ಲೀಕ್‌ನಲ್ಲಿ ರಾಹುಲ್, ಡಿಕೆ ಅರೆಸ್ಟ್ ಆಗ್ತಾರೆ ಎಂಬ ದೇವರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಫಿಕ್ಸ್ ಮಾಡೋಕೆ ಮಾಡ್ತಿದ್ದಾರೆ. ದೇವರಾಜೇಗೌಡರೇ ಬಿಜೆಪಿ ನಾಯಕರು ನನ್ನ ಹಿಂದೆ ಇದ್ದಾರೆ ಅಂತ ಹೇಳಿದ್ದಾರೆ. ಡಿಕೆ ಶಿವಕುಮಾರ್, ದೇವರಾಜೇಗೌಡ ಜೊತೆ ಮಾತಾಡೋ ಆಡಿಯೋ ನಾನು ಕೇಳಿಲ್ಲ. 30 ಸೆಕೆಂಡ್ ಆಡಿಯೋ ಕೇಳಿದ್ದೇನೆ. ಅದರಲ್ಲಿ ಏನಿಲ್ಲ. ಈ ಕೇಸ್‌ಗೆ ಅಮಿತ್ ಶಾ ಡೈರೆಕ್ಟರ್. ನಿರ್ಮಾಪಕರು ಜೆಡಿಎಸ್ ಅವರು ಇರಬಹುದು. ನಾಯಕ ತಮ್ಮ ಮನೆ ಮಗ ಅಂತಾ ಇವರು ಹೇಳ್ತಿಲ್ಲ ಎಂದರು.