ಬೆಂಗಳೂರು: ನಿಗಮ ಮಂಡಳಿ (Corporation Board) ನೇಮಕ ವಿಚಾರದಲ್ಲಿ ನನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಪರಮೇಶ್ವರ್ (G Parameshwar) ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (Siddaramaiah), ಎಲ್ಲರ ಅಭಿಪ್ರಾಯ ಪಡೆಯಲು ಕಷ್ಟವಾಗುತ್ತೆ ಎಂದು ಟಾಂಗ್ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪರಮೇಶ್ವರ್ ಜೊತೆ ಮಾತನಾಡಿದ್ದೇನೆ. ನಿಗಮ ಮಂಡಳಿಗಳಿಗೆ ನೇಮಕಾತಿಗೆ ಶಾಸಕರದ್ದು ಎಲ್ಲಾ ಕ್ಲಿಯರ್ ಆಗಿದೆ. ಇನ್ನು ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗುತ್ತಿದೆ. ನಾವು ಮತ್ತು ಡಿಕೆಶಿ ಚರ್ಚೆ ನಡೆಸಿದ್ದೇವೆ. ಸುರ್ಜೇವಾಲ ಬಳಿ ಲಿಸ್ಟ್ ಇದೆ. ವೇಣುಗೋಪಾಲ್ ಸಹಿ ಆಗಬೇಕಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇದು ತಹಶೀಲ್ದಾರ್ ತಪ್ಪು, ಕಣ್ಣನ್ ಅವರದ್ದಲ್ಲ- ಸಂಬಳ ವಾಪಸ್ ಕೇಳಿದ ವಿಚಾರಕ್ಕೆ ರಾಮಲಿಂಗಾರೆಡ್ಡಿ ಸ್ಪಷ್ಟನೆ
Advertisement
Advertisement
ಇದೇ ವೇಳೆ ರಾಹುಲ್ ಗಾಂಧಿ (Rahul Gandhi) ಪಾದಯಾತ್ರೆ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ಮಟ್ಟ ಹಾಕೋದು ಸ್ವಾತಂತ್ರ್ಯ ಕಸಿದಂತೆ. ದೇಶದ ಸಮಸ್ಯೆಗಳಿಗಾಗಿ ರಾಹುಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅದನ್ನು ತಡೆಯುವ ಕೆಲಸ ಬಿಜೆಪಿ, ಹಲವು ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ (Congress) ಪಕ್ಷ ಪ್ರತಿಭಟನೆ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ
Advertisement