ಬೆಂಗಳೂರು: ಜಾತಿಗಣತಿ (Caste Census) ಹೊರಗಡೆ ತರಲು ಕಷ್ಟ, ಆದರೂ ಈಗ ಮುಖ್ಯಮಂತ್ರಿಗಳು ಹೊರಗಡೆ ತಂದಿದ್ದಾರೆ. ವಸ್ತುಸ್ಥಿತಿ ಏನಿದೆ ಎಂದು ಗೊತ್ತಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಹೊರತಂದಿರುವ ಕಾರಣ ಯೋಜನೆಗಳು, ಕಾರ್ಯಕ್ರಮಗಳನ್ನು ಈಗಲೇ ಹೇಳಲು ಆಗುವುದಿಲ್ಲ. ಕೊಟ್ಟಿರುವ ಪ್ರತಿಗಳನ್ನು ಎಲ್ಲ ಮಂತ್ರಿಗಳು ಓದಿಕೊಂಡು ಬರಬೇಕು. ಏ.17ರಂದು ನಡೆಯಲಿರುವ ಕ್ಯಾಬಿನೆಟ್‌ನಲ್ಲಿ ಯಾವ ವಿಷಯ ಬೇಡ ಈ ಒಂದು ವಿಚಾರದ ಮೇಲೆ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ಚರ್ಚೆ ಮಾಡಿದ ನಂತರ ಸ್ವೀಕರಿಸುವ ಬಗ್ಗೆ ತೀರ್ಮಾನ ಆಗಲಿದೆ ಎಂದರು.ಇದನ್ನೂ ಓದಿ: ಬಿಹಾರ ಮೂಲದ ಸೈಕೋ ಎನ್‌ಕೌಂಟರ್: ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹೊಡೆದಿದ್ದಾರೆ – ಪರಮೇಶ್ವರ್
ಈಗ ವರದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ. 2018ರಿಂದ ಪ್ರಾರಂಭವಾಗಿದ್ದು, 10 ವರ್ಷಗಳ ಬಳಿಕ ನಾವು ಆಚೆಗೆ ತರುತ್ತಿದ್ದೇವೆ. ಸ್ಟಡಿ ಮಾಡಿ ಚರ್ಚೆ ಮಾಡೋಣ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. ಸಮುದಾಯದ ಅಭಿಪ್ರಾಯಗಳು, ರಾಜಕಾರಣಿಗಳ ಅಭಿಪ್ರಾಯಗಳು ಎಲ್ಲವೂ ಬರುತ್ತಿದೆ. ಚರ್ಚೆ ಮಾಡಿ ನಂತರ ನೋಡುತ್ತೇವೆ ಎಂದು ಹೇಳಿದರು.
ನಾನು ವರದಿಯನ್ನು ಇನ್ನೂ ಓದುತ್ತಿದ್ದೇನೆ, ನಾಲ್ಕೈದು ಪೇಜ್ ಓದಿದ್ದೇನೆ. ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ. ಅದರ ಪರಿಣಾಮ, ಯೋಜನೆಗಳು, ಚರ್ಚೆ ಒಂದು ಭಾಗದಲ್ಲಿ ಇಡೋಣ ಎಂದು ತಿಳಿಸಿದರು.ಇದನ್ನೂ ಓದಿ: ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದ ಯತ್ನಾಳ್