ದೇವರ ಹುಂಡಿಗೆ ಹಣ ಹಾಕುವುದು ಅಸಹ್ಯಕರ: ಸಾಹಿತಿ ಕುಂ.ವೀರಭದ್ರಪ್ಪ

Public TV
2 Min Read
kum veerabhadrappa

ರಾಯಚೂರು: ದೇವರಿಗೆ ಹಣ ಹಾಕೋದು ದಾನವಲ್ಲ, ನಾವು ಮಾಡಿರುತಕ್ಕಂತ ಪಾಪದ ಪ್ರಾಯಶ್ಚಿತ್ತದ ಒಂದು ಮುಖ. ದೇವರ ಹುಂಡಿಗೆ ಹಣ ಹಾಕುವುದು ಅಸಹ್ಯಕರವಾದದ್ದು ಎಂದು ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ (Kum.Veerabhadrappa) ಹೇಳಿದ್ದಾರೆ.

ರಾಯಚೂರಿನಲ್ಲಿ (Raichuru) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರ ಹುಂಡಿಗೆ ಹಣ ಹಾಕುವುದು ಪಾಪವನ್ನ ರಿನಿವಲ್ ಮಾಡಿದಹಾಗೆ. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿದ್ದೀನಿ, ಇಷ್ಟು ಜನರನ್ನ ಹಾಳು ಮಾಡಿದ್ದೀನಿ. ದಯವಿಟ್ಟು ಇದನ್ನ ಕ್ಷಮಿಸಿ. ಹೊಸದಾಗಿ ಪಾಪ ಮಾಡಲಿಕ್ಕೆ ಅವಕಾಶ ಮಾಡಿಕೊಡು ಅನ್ನೋದು ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನ ಮಾನ-ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಟೀಕೆ

hundi

ಮುಂದೆ ರೋಜಾ, ಹಜ್, ರಜಾಕ್ ಇವೆಲ್ಲಾ ಶುರುವಾಗ್ತವೆ. ಅವೆಲ್ಲಾ ಇನ್ನೊಬ್ಬರಿಗೆ ಕೊಡಬೇಕು ಅಂತ ಹೇಳುತ್ತವೆ. ಕುರಾನ್ ಬಗ್ಗೆ ಹೇಳಿದ್ರೆ ಮುಸ್ಲಿಂ ಪರ ಮಾತನಾಡುತ್ತೇನೆ ಅಂತಲ್ಲ. ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅನಿಸ್ತದೆ ಅಂದ್ರೆ. ಒಳ್ಳೆಯದು ಎಲ್ಲಿದೆ ಅದನ್ನ ನಾವು ಸ್ವೀಕರಿಸಬೇಕು. ಬಸವಣ್ಣ ಹೇಳಿದ್ದಾನೆ ಅದು ನಮ್ಮದು. ಮಹಮ್ಮದ್ ಪೈಗಂಬರ್ ಹೇಳಿದ್ದು ನಮ್ಮದು. ಯೇಸು ಕ್ರಿಸ್ತನು ಹೇಳಿದ್ದು ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳಕೊಡು ಅಂತ. ಆದ್ರೆ ತಿರುಪತಿಯಲ್ಲಿ ನೋಡಿದ್ರೆ ನಿಜಕ್ಕೂ ಅತ್ಯಂತ ಅಸಹ್ಯಕರವಾದದ್ದು ಎಂದು ಲೇವಡಿ ಮಾಡಿದ್ದಾರೆ.

ದೇವರ ಹುಂಡಿಗೆ ಕೋಟಿಗಟ್ಟಲೆ ಹಣ, ಬಂಗಾರ ಹಾಕೋದು ಅಸಹ್ಯ. ಹಣ ಹಾಕುವವರೆಲ್ಲರೂ ನಿಜವಾಗಿಯೂ ಈ ದೇಶದ ದೊಡ್ಡ. ಮುಂದೆ ನಾನು ಹೇಳುವುದಿಲ್ಲ. ಇವನು ಹಿಂದೂ ದ್ರೋಹಿ ಅಂತಾರೆ. ಅದು ದೊಡ್ಡ ಪ್ರಾಬ್ಲಂ. ಮುಸಲ್ಮಾನರನ್ನ ಹೊಗಳಿದ ತಿರುಪತಿ ಹುಂಡಿಗೆ ಹಾಕುವವರಿಗೆ ಡ್ಯಾಶ್ ಇಟ್ಟ ಅಂತಾರೆ. ಬಡವರಿಗೆ ದಾನ ಮಾಡಿ ಒಳ್ಳೆಯ ಕಾರ್ಯಗಳನ್ನ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ವಿಜಯೇಂದ್ರ

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಹಾಡಿಹೊಗಳಿದ ಕುಂ.ವೀರಭದ್ರಪ್ಪ, ಗ್ಯಾರಂಟಿ ಯೋಜನೆಗಳಿಂದ ದೇಶ ಹಾಳಾಗುತ್ತೆ ಅಂತಾರೆ. ಮನೆಯೊಳಗೆ ಬಂಧಿಯಾಗಿ ಇರತಕ್ಕಂತವರನ್ನ ಫ್ರೀ ಬಸ್ ಅಂತೇಳಿ ಸರ್ಕಾರ ಹೊರಬಿಟ್ಟಿತು. ಎಲ್ಲಿಯವರೆಗೆ ಮಹಿಳೆಯರನ್ನ ಮನೆಯಲ್ಲೇ ಇಟ್ಟಿರುತ್ತೀರಿ. ಫ್ರೀ ಬಸ್ ನೀವು ಎಲ್ಲಿಯಾದರೂ ಓಡಾಡಿ ಅಂತು ಸರ್ಕಾರ. ಆಗ ಮೈಚಳಿ ಬಿಟ್ಟು ಮನೆಯಿಂದ ಮಹಿಳೆಯರು ಹೊರಬಂದ್ರು. ಅದು ನಿಜವಾದ ಮಹಿಳಾ ದಿನಾಚರಣೆ. ಜಾತ್ರೆಯಲ್ಲಿ ಎಲ್ಲಿ ನೋಡಿದ್ರು ಮಹಿಳೆಯರು. ಯಾಕೆಂದರೆ ಅದು ಸರ್ಕಾರದ ಗ್ಯಾರಂಟಿ. ಮಳೆ ಬಂದಿಲ್ಲ ಅಂದ್ರೂ ಫ್ರೀ ಅನ್ನ ಊಟ ಸಿಗುತ್ತಲ್ಲಾ ಇವೆಲ್ಲ ನಾವು ಬಹಳ ಹೆಮ್ಮೆಪಡುವಂತವುಗಳು ಎಂದು ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Share This Article