ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

Public TV
1 Min Read
SHOBHA KARANDLAJE 2

ಬೆಂಗಳೂರು: ಸದಾನಂದಗೌಡರು (Sadananda Gowda) ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡೋದಿಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿ ಎಂದು ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಸದಾನಂದಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿಗಳು. ಸದಾನಂದಗೌಡ ಪಕ್ಷ ಬಿಡುವ ಯೋಚನೆ ಕೂಡಾ ಮಾಡಲ್ಲ ಎಂದರು. ಇದನ್ನೂ ಓದಿ: ಸ್ಟ್ರಾಂಗ್ ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ- ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

DV Sadananda Gowda

ಸದಾನಂದಗೌಡರು ನಮ್ಮ ಹಿರಿಯರು. ನಾನು ಮೊದಲ ದಿನ ಹೋದಾಗಲೇ ಆಶೀರ್ವಾದ ಮಾಡಿದ್ದಾರೆ. ಆದಾದ ಮೇಲೆ ಕೆ.ಆರ್ ಪುರಂ ಮತ್ತು ಪುಲಕೇಶಿ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಬಂದು ಭಾಗಿಯಾಗಿದ್ದರು. ನನಗಿಂತ ಉತ್ಸಾಹದಿಂದ ಅವರು ಓಡಾಡುತ್ತಾರೆ. ಅವರು ಇವತ್ತು ಊರಿಗೆ ಹೋಗಿದ್ದಾರೆ. ವಾಪಸ್ ಬಂದ ಮೇಲೆ ನಮ್ಮೆಲ್ಲರ ಪರವಾಗಿ ಅವರು ಕೆಲಸ ಮಾಡುತ್ತಾರೆ. ನನ್ನ ಪರ ಮಾತ್ರವಲ್ಲ ಮೈಸೂರಿಗೆ ಅವರು ಹೋದರೂ ಅನುಕೂಲ ಆಗುತ್ತದೆ. ಅಲ್ಲೂ ಕೂಡಾ ಪ್ರಚಾರ ಮಾಡುತ್ತಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲ!

ಕಾಂಗ್ರೆಸ್ (Congress) ನಾಯಕರಿಂದ ಸದಾನಂದಗೌಡ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲವೂ ಸುಳ್ಳು. ಕಾಂಗ್ರೆಸ್ ಅವರು ಸಂಶಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿಗಳು ಇಲ್ಲ. ಕಾಂಗ್ರೆಸ್‌ನಲ್ಲಿ ಒಳಜಗಳ ಇದೆ. ಇದನ್ನ ಮರೆಮಾಚೋಕೆ ಬಿಜೆಪಿಯ (BJP) ಆ ನಾಯಕ ಬರುತ್ತಾರೆ. ಈ ನಾಯಕ ಬರ್ತಾರೆ, ಅವರನ್ನ ಮಾತನಾಡಿಸುತ್ತೇವೆ. ಇವರನ್ನು ಮಾತಾಡಿಸುತ್ತೇವೆ ಅನ್ನೋ ಸುಳ್ಳು ಸುದ್ದಿ ಬಿಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾ.22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ; 5 ಕ್ಷೇತ್ರದಲ್ಲಿ ಎರಡು ಕಗ್ಗಂಟು – ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಡೌಟು

Share This Article