ಬಾಲಿವುಡ್ ನ ಜನಪ್ರಿಯ ನಟಿ, ಹೆಸರಾಂತ ನಟ ಗೋವಿಂದ್ ಅವರ ಅಕ್ಕನ ಮಗಳು ರಾಗಿಣಿ ಖನ್ನಾ (Ragini Khanna) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದಾರೆ ಎಂದು ವರದಿಯಾಗಿತ್ತು. ಮತಾಂತರ ಗೊಂಡ ಒಂದೇ ದಿನಕ್ಕೆ ಅವರು ವಾಪಸ್ಸು ಹಿಂದೂ ಧರ್ಮಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಅವರು ಮೌನ ಮುರಿದಿದ್ದಾರೆ.
ಅಭಿಮಾನಿಯೊಬ್ಬ ಒಂದು ಪೋಸ್ಟ್ ಮಾಡಿದ್ದ, ಅದನ್ನು ನಾನು ರೀಪೋಸ್ಟ್ ಮಾಡಿ ಸಂಕಟಕ್ಕೆ ಸಿಲುಕಿಕೊಂಡೆ. ನಾನು ಯಾವುದೇ ಕಾರಣಕ್ಕೂ ಮತಾಂತರಗೊಂಡಿಲ್ಲ. ಅದೆಲ್ಲವೂ ಸುಳ್ಳು. ಅಭಿಮಾನಿಯ ಎಡವಟ್ಟಿನಿಂದಾಗಿ ನಾನು ನೋವು ಅನುಭವಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ರಾಗಿಣಿ ಒಂದು ದಿನದ ಹಿಂದೆಯಷ್ಟೇ ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರ (convert) ಆಗಿ, ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದು ವರದಿಯಾಗಿತ್ತು. ತಾನು ಮತಾಂತರವಾಗಿ ತಪ್ಪು ಮಾಡಿದೆ, ನನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿತ್ತು.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ. ಬೇರೆ ಧರ್ಮಕ್ಕೆ ಮತಾಂತರವಾದ ನಂತರ, ಇಂದಿನಿಂದ ಈ ಧರ್ಮವನ್ನು ಪಾಲಿಸುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.
ಮತಾಂತರಗೊಳ್ಳುವ ಕುರಿತಂತೆ ಹಾಕಿದ್ದ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದು, ಹಿಂದೂ (Hindu) ಧರ್ಮದ ಬಗ್ಗೆ ಮಾಡಲಾದ ಭಾಷಣವನ್ನು ಅವರು ಪೋಸ್ಟ್ ಮಾಡಿ, ಅದಕ್ಕೆ ತಮ್ಮ ತಮ್ಮ ಫೋಟೋ ಅಂಟಿಸಿದ್ದರು. ಈಗ ಎಲ್ಲ ಗೊಂದಲಕ್ಕೂ ಅವರು ತೆರೆ ಎಳೆದಿದ್ದಾರೆ.