ಬೆಂಗಳೂರು: ಶಿವಮೊಗ್ಗ (Shivamogga) ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್. ಅಶೋಕ್ (R.Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಕರ್ನಾಟಕ (Karnataka) ಮತ್ತೊಂದು ಬಿಹಾರ (Bihar) ಆಗುತ್ತಿದೆ ಎಂದು ಅನಿಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಸರ್ಕಾರ ಬಂದ ಮೇಲೆ ಗೂಂಡಾಗಿರಿ ಶುರುವಾಗಿದೆ. ಹಿಂದೂಗಳು ಯಾವುದೇ ಗಲಾಟೆಗೆ ಹೋಗದಿದ್ದರೂ ಮನೆಗೆ ನುಗ್ಗಿ ಹೊಡೆದಿದ್ದಾರೆ. ಹಿಂದೆಯೂ ಸಿದ್ದರಾಮಯ್ಯ ಸರ್ಕಾರದಲ್ಲಿ ಟಿಪ್ಪು ಜಯಂತಿ ಮಾಡಿ ಗಲಾಟೆ ಆಗಿತ್ತು. ನಿರಪರಾಧಿಗಳ ಮೇಲೆ ಹಲ್ಲೆಯಾಗಿದೆ. ಸರ್ಕಾರದ ಕುಮ್ಮಕ್ಕೇ ಇದಕ್ಕೆ ಕಾರಣ ಎಂದು ಹರಿಹಾಯ್ದರು. ಇದನ್ನೂ ಓದಿ: ಪೊಲೀಸರ ಮೇಲೆ ಕಲ್ಲು ತೂರಾಟ ಹೊಸದೇನಲ್ಲ: ಪರಮೇಶ್ವರ್ ಬೇಜವಾಬ್ದಾರಿ ಮಾತು
Advertisement
Advertisement
ಸರ್ಕಾರ ಕೇಸ್ ಮಾಡಲ್ಲ ಅನ್ನೋ ಧೈರ್ಯ. ಹಿಂದೆ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಪಿಎಫ್‌ಐ (PFI) ಗ್ಯಾಂಗ್‌ನಿಂದಲೇ ಘಟನೆಯಾಗಿದೆ. ಪಿಎಫ್‌ಐ ಗ್ಯಾಂಗ್ ಗಲಾಟೆ ಮಾಡಿರೋದು. ಕಾಂಗ್ರೆಸ್ ಬಂದರೆ ಪಿಎಫ್‌ಐಗೆ ಹಬ್ಬ. ಪ್ರಚೋದನೆ ಮಾಡದೇ ಕಲ್ಲು ಹೊಡೆಯುತ್ತಾರೆ ಎಂದರೆ ಇವರ ಗೂಂಡಾಗಿರಿ ಎಂತದ್ದು. ಇಂಟೆಲಿಜೆನ್ಸ್ ಕೂಡ ಸತ್ತು ಹೋಗಿದೆ. ನಾವು ಕೇಸ್ ಮಾಡಿದರೂ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತಾರೆ ಅನ್ನೋ ಕಾರಣಕ್ಕೆ ನಾವ್ಯಾಕೆ ಕೇಸ್ ಮಾಡೋದು ಅಂತಾ ಇಂಟೆಲಿಜೆನ್ಸ್ ಕೂಡ ಸುಮ್ಮನಿದೆ ಎಂದರು. ಇದನ್ನೂ ಓದಿ: ಶಿವಮೊಗ್ಗ ಕೋಮು ಗಲಭೆ ಪ್ರಕರಣದಲ್ಲಿ 43 ಜನರ ಬಂಧನ: ಸಿದ್ದರಾಮಯ್ಯ
Advertisement
ಕೇಸ್ ಮಾಡಿದರೆ ನಮ್ಮನ್ನು ಎತ್ತಂಗಡಿ ಮಾಡುತ್ತಾರೆ ಅನ್ನೋ ಭಯ ಅಲ್ಲಿನ ಎಸ್‌ಪಿ ಅವರಿಗೂ ಇದೆ. ಕಾಂಗ್ರೆಸ್ ಬಂದ ಮೇಲೆ ಪೊಲೀಸರಿಗೂ ಭಯ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇದು ಕೋಮು ಗಲಭೆಯಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾಡಿದ್ದು: ಮಧು ಬಂಗಾರಪ್ಪ
Advertisement
ಶಿವಮೊಗ್ಗ ಕೋಮುಗಲಭೆಗೆ ಸಂಬಂಧಪಟ್ಟಂತೆ ಗೃಹಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರ ಹೇಳಿಕೆ ಸರಿಯಲ್ಲ. ಬೆಂಕಿ ಸಣ್ಣದಿದ್ದರೂ ದೊಡ್ಡದಾಗಬಹುದು. ಸರ್ಕಾರ ಬೇಜವಾಬ್ದಾರಿಯಾಗಿ ನಡೆದುಕೊಂಡಿರೋದು ಸ್ಪಷ್ಟವಾಗಿದೆ. ಹಿಂದೆ ಕೂಡ ಕೇರಳ, ಬಂಗಾಳ, ಬಿಹಾರ, ಬಾಂಗ್ಲಾದಿಂದ ಬಂದು ಗಲಾಟೆ ಮಾಡಿದ್ದು ಕಾಮನ್ ಆಗಿದೆ. ಕಾಂಗ್ರೆಸ್ ಬಂದ ಮೇಲೆ ಹೆಚ್ಚಾಗಿದೆ. ಕಾರಣ ಅವರು ಕೇಸ್ ಹಾಕಲ್ಲ. ಹಾಕಿದ್ರೂ ಕ್ಯಾಬಿನೆಟ್‌ನಲ್ಲಿ ವಿಥ್‌ಡ್ರಾ ಮಾಡ್ತಾರೆ ಅನ್ನೋ ಕಾರಣಕ್ಕೆ ಬಂದು ಗಲಭೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಬ್ಬಗಳಿದ್ದರೂ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ: ಬೊಮ್ಮಾಯಿ ಕಿಡಿ
Web Stories