– ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ
– ಸರ್ಕಾರದ ಕಾರು ವಾಪಸ್
ಬೆಂಗಳೂರು: ಅದೃಷ್ಟ ಖುಲಾಯಿಸುತ್ತೆ ಅಂತಾ ಹೊಸ ಮನೆ ಕಟ್ಟಿಸಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಪಿಎ ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿ ತಡರಾತ್ರಿ ಅಂತ್ಯಗೊಂಡಿದೆ.
Advertisement
ಉಮೇಶ್ ನ ಸ್ವಾರಸ್ಯಕರ ಸಂಗತಿಯೆಂದರೆ ಹೊಸ ಮನೆ ಕಟ್ಟಿಸಿದ್ದರು ಕೂಡ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆಗಿದ್ದ. ಇದರ ಹಿಂದೆ ರೋಚಕ ಕಹಾನಿ ಇದ್ದು, ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುವುದೆಂದು ಈ ಮನೆಯಲ್ಲಿ ವಾಸವಿದ್ದ. ಇದೇ ಮನೆಯ ಕೆಳಭಾಗದಲ್ಲಿ ಈ ಹಿಂದೆ ರಿಯಲ್ ಎಸ್ಟೇಟ್ ಕಚೇರಿ ಇತ್ತು. 90ರ ದಶಕದಲ್ಲಿ ಕಾಮದೇನು ಎಂಟರ್ ಪ್ರೈಸಸ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ ಇದೇ ಮನೆಯಲ್ಲಿ ವಾಸಿವದ್ದರು. ಅವರಿಗೆ ಅದೃಷ್ಟ ತಂದಿದ್ದ ಮನೆಯಲ್ಲಿ ಉಮೇಶ್ ವಾಸವಿದ್ದ. ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೇ ಸಿಎಂ ಕಚೇರಿಯಿಂದ ಉಮೇಶ್‍ಗೆ ಗೇಟ್‍ಪಾಸ್
Advertisement
Advertisement
ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟ ತಂದೊಡ್ಡಿತಾ ಮನೆ
ಕರ್ನಾಟಕ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯ ಶೆಟ್ಟಿಗೆ ಅದೃಷ್ಟ ತಂದಷ್ಟೇ ವೇಗವಾಗಿ ದುರದೃಷ್ಟಕ್ಕೂ ಈ ಮನೆ ಕಾರಣವಾಗಿತ್ತು. ಕಾಕತಾಳಿಯವೋ, ಅದೃಷ್ಟದ ಲೆಕ್ಕಚಾರವೋ ಇದೀಗ ಬಿಎಸ್‍ವೈ ಪಿಎ ಉಮೇಶ್‍ಗೂ ಇದೇ ಸಂಕಷ್ಟ ಎದುರಾಗಿದೆ. ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್, ಬಿಎಸ್‍ವೈ ಪಿಎ ಆದ ಬಳಿಕ ಕೋಟ್ಯಂತರ ಮೌಲ್ಯದ ಆಸ್ತಿ, ಪಾಸ್ತಿಗಳಿಸಿದ್ದಾನೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ
Advertisement
ಉಮೇಶ್ ಮನೆ ಮೇಲೆ ನಡೆದ ಐಟಿ ದಾಳಿಯನ್ನು ತಡ ರಾತ್ರಿ ಐಟಿ ಅಧಿಕಾರಿಗಳು ಅಂತ್ಯಗೊಳಿಸಿದರು. 7 ಮಂದಿ ಐಟಿ ಅಧಿಕಾರಿಗಳಿಂದ ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಬಳಿಕ ಉಮೇಶ್‍ಗೆ ಸೇರಿದ ಬ್ಯಾಂಕ್ ಖಾತೆಗಳ ವಿವರ, ಲ್ಯಾಪ್‍ಟಾಪ್, ಪೆನ್ ಡ್ರೈವ್, ನೀರಾವರಿ ಇಲಾಖೆಗೆ ಸಂಬಂಧಪಟ್ಟ ದಾಖಲಾತಿ ಸೇರಿದಂತೆ ಮಹತ್ವದ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಉಮೇಶ್‍ಗೆ ಇಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ
ಇದೀಗ ಐಟಿ ರೇಡ್ ಬೆನ್ನಲ್ಲೇ ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯಿಂದಲೂ ಸಹ ಉಮೇಶ್‍ನನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದಿಂದ ಇನ್ನೋವಾ ಕಾರನ್ನು ಉಮೇಶ್‍ಗೆ ನೀಡಲಾಗಿತ್ತು. ಈ ಕಾರನ್ನು ರಾತ್ರೋರಾತ್ರಿ ಅಧಿಕಾರಿಗಳು ಕುಮಾರಕೃಪಗೆ ವಾಪಸ್ ತೆಗೆದುಕೊಂಡು ಬಂದಿದ್ದಾರೆ.