ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಬಲೆಗೆ ಸಿಲುಕಿಕೊಂಡಿರುವ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಗೆ ಇದೀಗ ಮತ್ತಷ್ಟು ಟೆನ್ಶನ್ ಶುರುವಾಗಿದೆ.
ಐಟಿ ದಾಳಿಯಲ್ಲಿ ಸಿಕ್ಕ ಸಂಪತ್ತಿನ ದಾಖಲೆಗಳು ಮತ್ತು ಹಣದ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ನೀಡಲಿಲ್ಲ. ಶೋಧದ ಬಳಿಕ ಡಿಕೆಶಿ ಕುಟುಂಬವನ್ನು ಕರೆಸಿಕೊಂಡಿದ್ದ ಅಧಿಕಾರಿಗಳು ನಾನಾ ಪ್ರಶ್ನೆಗಳನ್ನು ಕೇಳಿದ್ದರು. ಇಷ್ಟೊಂದು ಸಂಪತ್ತು ಎಲ್ಲಿಂದ ಬಂತು..? ಇಷ್ಟೊಂದು ಹಣ ಎಲ್ಲಿತ್ತು? ಅನ್ನೋದ್ರ ಬಗ್ಗೆ ಡಿಕೆಶಿ ಸಮರ್ಪಕ ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಡಿಕೆಶಿ ಮೇಲೆ ಕೇಸ್ ದಾಖಲಾಗ್ತಿದ್ದಂತೆಯೇ ಆಪ್ತರು ಯೂಟರ್ನ್!
Advertisement
ಅಷ್ಟೇ ಅಲ್ಲದೇ ಕರ್ನಾಟಕ ವಿಧಾನಸಭಾ ಚುನವಾಣೆ ಸಂದರ್ಭದಲ್ಲಿ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಇರಿಸಲಾಗಿದ್ದ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಡಿ.ಕೆ ಶಿವಕುಮಾರ್ ಚೀಟಿ ಹರಿಯುತ್ತಿದ್ದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆ ಚೀಟಿಯಲ್ಲಿ ಏನಿತ್ತು..? ಅನ್ನೋದನ್ನ ಕೂಡ ಡಿಕೆಶಿ ಇದುವರೆಗೂ ಸ್ಪಷ್ಟಪಡಿಸಿಲ್ಲ.
Advertisement
ರೆಸಾರ್ಟ್ ನಲ್ಲಿ ಸಿಕ್ಕ ಹಾಳೆಗಳಲ್ಲಿ ಹಲವು ಲೆಕ್ಕಗಳನ್ನು ಬರೆಯಲಾಗಿದೆ. ಅವೆಲ್ಲವೂ ಏನು ಅನ್ನೋದು ಪ್ರಶ್ನೆಯಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಮತ್ತೊಮ್ಮೆ ವಿಚಾರಣೆ ಹಾಜರಾಗಿ ಉತ್ತರ ಕೊಡಿ ಎಂದು ಐಟಿ ಇಲಾಖೆ ಡಿಕೆಶಿಗೆ ಸೂಚಿಸಿದೆ. ಇದನ್ನೂ ಓದಿ: Exclusive: ಸಚಿವ ಡಿಕೆಶಿಗೆ ಭಾರೀ ಸಂಕಷ್ಟ – ಐಟಿ ಇಲಾಖೆ ಕೋರ್ಟ್ ಗೆ ಕೊಟ್ಟ ಕಂಪ್ಲೆಂಟ್‍ನಲ್ಲಿ ಏನಿದೆ ಗೊತ್ತಾ?
Advertisement
ಈ ಹಿಂದೆ ಐಟಿ ಕೇಳಿದ್ದ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಡಿ.ಕೆ.ಶಿವಕುಮಾರ್ ಸಮಯ ಕೇಳಿದ್ದರು. ಆದರೆ ಕೊಟ್ಟ ಸಮಯ ಮುಗಿದಿರುವ ಹಿನ್ನೆಲೆಯಲ್ಲಿ ವಿಚಾರಣೆ ಗೆ ಹಾಜರಾಗುವಂತೆ ಐಟಿ ನೋಟಿಸ್ ನೀಡಿತ್ತು. ಈಗ ಐಟಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಉತ್ತರಿಸಲೇಬೇಕಾದ ಅನಿವಾರ್ಯತೆ ಬಂದಿದೆ. ಒಂದು ವೇಳೆ ಉತ್ತರಿಸದೇ ಹೋದರೆ ಮತ್ತೆ ಕೇಸ್ ದಾಖಲಾಗುವ ಸಾಧ್ಯತೆ ಇದೆ.
Advertisement
https://www.youtube.com/watch?v=LiyJYqJrqQs