ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಹಿಂದೆ ಬಿದ್ದಿರೋ ಆದಾಯ ತೆರಿಗೆ ಇಲಾಖೆ ಮೂರು ದಿನಗಳ ಡಿಕೆಶಿ ಮತ್ತವರ ಸಂಬಂಧಿಕರು, ಆಪ್ತರ ಮನೆ ಮೇಲಿನ ದಾಳಿಯಲ್ಲಿ ಸಿಕ್ಕ ಆಸ್ತಿ-ಪಾಸ್ತಿಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.
ಈ ಹಿನ್ಮೆಲೆಯಲ್ಲಿ ಇವತ್ತು ಎರಡನೇ ಬಾರಿಗೆ ಡಿಕೆಶಿ ಐಟಿ ಮುಂದೆ ಹಾಜರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದು ಸಹಜವಾಗಿಯೇ ಗುಜರಾತ್ ರಾಜ್ಯಸಭಾ ಚುನಾವಣಾ ಗೆಲುವಿನ ಖುಷಿಯನ್ನು ಕಿತ್ತುಕೊಂಡಿದೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್‍ಗೆ ಸೇರಿದ 27 ಅಕೌಂಟ್‍ಗಳನ್ನು ಐಟಿ ಮುಟ್ಟುಗೋಲು ಹಾಕಿಕೊಂಡಿದೆ.
Advertisement
ಕಳೆದ ನವೆಂಬರ್‍ನಲ್ಲಿ ನೋಟು ನಿಷೇಧವಾದ ಬಳಿಕ ಡಿಕೆಶಿಗೆ ಸೇರಿದ ಬ್ಯಾಂಕ್ ಅಕೌಂಟ್‍ಗಳಿಂದ ಹಿಡಿದು ಶಿಕ್ಷಣ ಸಂಸ್ಥೆಗಳ ಮೂಲಕ ಸುಮಾರು 100 ಕೋಟಿ ವಹಿವಾಟು ನಡೆದಿದೆಯಂತೆ. ಹೀಗಾಗಿ ಹಣದ ಮೂಲದ ಬಗ್ಗೆ ಪ್ರಶ್ನೆ ಕೇಳಿ ಡಿಕೆಶಿಗೆ ಐಟಿ ನೊಟೀಸ್ ಜಾರಿ ಮಾಡಿದ್ದು ಆ ಅನುಮಾನಗಳಿಗೆ ಡಿಕೆಶಿ ದಾಖಲೆ ಸಹಿತ ಉತ್ತರಿಸಬೇಕಿದೆ.
Advertisement
ಇದನ್ನೂ ಓದಿ: ಮೋದಿ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದ ದ್ವಾರಕಾನಾಥ ಗುರೂಜಿ 2019ರ ಬಗ್ಗೆ ಹೇಳಿದ್ದು ಹೀಗೆ
Advertisement
ಡಿಕೆ ಶಿವಕುಮಾರ್ ಬಗ್ಗೆ 25 ವರ್ಷದ ಹಿಂದೆ ಹೇಳಿದ ಮಾತಿಗೆ ನಾನು ಈಗಲೂ ಬದ್ಧ: ದ್ವಾರಕಾನಾಥ ಗುರೂಜಿ https://t.co/fTKzcNbD7j #Dwarakanath #DKShivakumar pic.twitter.com/3XFqWwcKE0
— PublicTV (@publictvnews) August 9, 2017
Advertisement
https://www.youtube.com/watch?v=mSJl6qQnCUE