ನವದೆಹಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ 40,618 ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದೆ.
2018ರ ನವೆಂಬರ್ 15 ರಿಂದ 2019ರ ಆಗಸ್ಟ್ 12 ರವರೆಗೆ ತಯಾರಿಸಲಾದ 1 ಲೀಟರ್ ಎಂಜಿನ್ ಸಾಮರ್ಥ್ಯದ ವ್ಯಾಗನ್ ಆರ್ ಕಾರುಗಳನ್ನು ಹಿಂದಕ್ಕೆ ಪಡೆದಿದೆ.
Advertisement
ಸುರಕ್ಷಾ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರುಗಳನ್ನು ಮರಳಿ ಪಡೆಯುತ್ತಿದ್ದೇವೆ. ಇಂಧನದ ಕೊಳವೆ ಮತ್ತು ಮೆಟಲ್ ಕ್ಲ್ಯಾಂಪ್ ನಲ್ಲಿ ದೋಷಗಳಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
Advertisement
Advertisement
ಆಗಸ್ಟ್ 24 ರಿಂದ ಮೇಲೆ ತಿಳಿಸಿದ ಅವಧಿಯಲ್ಲಿ ಕಾರು ಖರೀದಿಸಿದ್ದಲ್ಲಿ ಮಾರುತಿ ಸುಜುಕಿ ಡೀಲರ್ ಸಂಪರ್ಕಿಸಿ ದೋಷಗೊಂಡಿರುವ ಭಾಗವನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಸಂದೇಹವಿದ್ದಲ್ಲಿ ಗ್ರಾಹಕರು ಮಾರುತಿ ಸುಜುಕಿ ವೆಬ್‍ಸೈಟಿಗೆ ಭೇಟಿ ನೀಡಿ ಚಾಸಿ ನಂಬರ್ ನಮೂದಿಸಿ ಪರಿಶೀಲಿಸಿಕೊಳ್ಳಬಹುದು.
2018ರಲ್ಲಿ ಮಾರುತಿ ಕಂಪನಿ ಹೊಸದಾಗಿ ಬಿಡುಗಡೆಯಾಗಿದ್ದ ಒಟ್ಟು 52,686 ಸ್ವಿಫ್ಟ್ ಮತ್ತು ಬಲೆನೊ ಕಾರುಗಳನ್ನು ಹಿಂದಕ್ಕೆ ಪಡೆದಿತ್ತು. ಬ್ರೇಕ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಪ್ರಕಟಿಸಿತ್ತು.
ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.36.3 ರಷ್ಟು ಇಳಿಕೆ ಕಂಡು ಬಂದಿತ್ತು. ಒಟ್ಟು 98,210 ಕಾರುಗಳು ಮಾತ್ರ ಮಾರಾಟವಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅತಿ ಕಡಿಮೆ ಕಾರು ಮಾರಾಟವಾದ ತಿಂಗಳು ಎಂದು ಮಾರುತಿ ಹೇಳಿತ್ತು.