Connect with us

ವಿಶ್ವಕಪ್ ಶೂಟಿಂಗ್: ಜೀತು ರಾಯ್‍ಗೆ ಕಂಚಿನ ಪದಕ

ವಿಶ್ವಕಪ್ ಶೂಟಿಂಗ್: ಜೀತು ರಾಯ್‍ಗೆ ಕಂಚಿನ ಪದಕ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‍ನಲ್ಲಿ ಜೀತು ರಾಯ್ ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಒಟ್ಟು 216.7 ಅಂಕಗಳನ್ನು ಪಡೆದ ಜೀತು ರಾಯ್ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಭಾರತ ಕೂಟದಲ್ಲಿ ಮೂರನೇ ಪದಕವನ್ನು ಗೆದ್ದುಕೊಂಡಿದೆ. ಜಪಾನ್ ಟಾಮೋಯುಕಿ ಒಟ್ಟು 240.1 ಅಂಗಳಿಸಿ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದರೆ, ವಿಯೆಟ್ನಾಂನ ವಿನ್‍ಹಾಂಗ್ 236.6 ಅಂಕಗಳಿಸಿ ಬೆಳ್ಳಿ ಗೆದ್ದರು.

ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಪೂಜಾ ಘಟ್ಕರ್ ಕಂಚು ಗೆದ್ದರೆ, ಪುರುಷರ ಡಬಲ್ ಟ್ರಾಪ್‍ನಲ್ಲಿ ಅಂಕುರ್ ಮಿತ್ತಲ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಪದಕ ಪಟ್ಟಿಯಲ್ಲಿ ಈಗ ಭಾರತ 5ನೇ ಸ್ಥಾನದಲ್ಲಿದೆ. ಚೀನಾ 6 ಚಿನ್ನ, 4 ಬೆಳ್ಳಿ ಗೆಲ್ಲುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, 2 ಚಿನ್ನದ ಪದಕ ಗೆದ್ದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ಪದಕ ಗೆಲ್ಲುವ ಫೇವರೇಟ್ ಆಗಿದ್ದ ಜಿತು ರಾಯ್ ರಿಯೋ ಒಲಿಂಪಿಕ್ಸ್ ನಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದ್ದರು.

Advertisement
Advertisement