Connect with us

Latest

ಇಸ್ರೋ ಮೈಲಿಗಲ್ಲು- ಒಂದೇ ನೆಗೆತಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ

Published

on

Share this

ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಭಾರತದ ಬಹ್ಯಾಕಾಶ ಸಂಸ್ಥೆ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವೊಂದು ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದೆ. ಪ್ರತಿ ಉಪಗ್ರಹವೂ 4.7 ಕೆ.ಜಿ. ತೂಕ ಹೊಂದಿದ್ದು, ಗಂಟೆಗೆ 27 ಸಾವಿರ ಕಿ.ಮೀ. ಅಂದರೆ ಪ್ರಯಾಣಿಕ ವಿಮಾನಕ್ಕಿಂತ 40 ಪಟ್ಟು ಅಧಿಕ ವೇಗದಲ್ಲಿ 101 ಸಣ್ಣ ಉಪಗ್ರಹಗಳನ್ನು 600 ಸೆಕೆಂಡ್‍ಗಿಂತ ಕಡಿಮೆ ಅವಧಿಯಲ್ಲಿ ಕಕ್ಷೆಗೆ ಸೇರಿಸುವಲ್ಲಿಇಸ್ರೋ ಯಶಸ್ವಿಯಾಗಿದೆ.

2014ರಲ್ಲಿ ರಷ್ಯಾ ಒಂದೇ ರಾಕೆಟ್‍ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆ. 104 ಉಪಗ್ರಹಗಳ ಪೈಕಿ ಭಾರತದ 4, ಅಮೆರಿಕದ 96 ಉಪಗ್ರಹಗಳು ಸೇರಿವೆ. ಉಳಿದಂತೆ ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‍ನಲ್ಲಿ ಬಾಹ್ಯಾಕಾಶ ಸೇರಲಿದೆ. ಅಮೆರಿಕದ ನಾಸಾಕ್ಕೆ ಹೋಲಿಸಿದರೆ ಇಸ್ರೋದ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ.

Click to comment

Leave a Reply

Your email address will not be published. Required fields are marked *

Advertisement