ನವದೆಹಲಿ: ಮಾನವರಹಿತ ಲೆವೆಲ್ ಕ್ರಾಸಿಂಗ್ ನಿಂದಾಗಿ ರೈಲಿಗೆ ಸಿಕ್ಕಿ ಅಪಘಾತವಾಗುವುದನ್ನು ತಡೆಯಲು ರೈಲ್ವೇ ಸಚಿವಾಲಯ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೆರವನ್ನು ಪಡೆದುಕೊಂಡಿದೆ.
ಹೌದು. ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು ಪರೀಕ್ಷಾರ್ಥ ಪ್ರಯೋಗವಾಗಿ ಮುಂಬೈ ಮತ್ತು ಅಸ್ಸಾಂ ರಾಜಧಾನಿ ಗುವಾಹಟಿ ಮಧ್ಯೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಳವಡಿಸಲಾಗಿದೆ.
Advertisement
ಏನಿದು ಹೊಸ ವ್ಯವಸ್ಥೆ?
ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಹೂಟರ್ಸ್ ಗಳನ್ನು ರೈಲ್ವೇ ಈಗ ಅಳವಡಿಸಿದೆ. ರೈಲು ಸಿಗ್ನಲ್ ಬಳಿ ಬರುತ್ತಿದ್ದಾಗ ರೈಲಿನಲ್ಲಿ ಅಳವಡಿಸಲಾಗಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್(ಐಸಿ) ಚಿಪ್‍ನಿಂದ ಸಿಗ್ನಲ್ ರವಾನೆಯಾಗಿ ಹೂಟರ್ಸ್ ಜೋರಾಗಿ ಶಬ್ಧ ಮಾಡುವ ಮೂಲಕ ಜನರನ್ನು ಎಚ್ಚರಿಸುತ್ತದೆ.
Advertisement
ಈಗಾಗಲೇ 20 ಹೂಟರ್ಸ್ ಗಳನ್ನು ಮುಂಬೈ – ಗುವಾಹಟಿ ಮಧ್ಯೆ ಇರುವ ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಅಳವಡಿಸಲಾಗಿದೆ ಎಂದು ಈ ಯೋಜನೆಯಲ್ಲಿ ತೊಡಗಿಕೊಂಡಿರುವ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಎಷ್ಟು ದೂರದಲ್ಲಿದ್ರೆ ಶಬ್ಧ?
500 ಮೀಟರ್ ದೂರದಿಂದ ರೈಲು ಬರುತ್ತಿದ್ದಾಗ ಹೂಟರ್ಸ್ ಎಚ್ಚರಿಕೆಯ ಶಬ್ಧ ಮೊಳಗಿಸಲು ಆರಂಭಿಸುತ್ತದೆ. ರೈಲು ಹತ್ತಿರ ಹತ್ತಿರ ಬರುತ್ತಿದ್ದಂತೆ ಸಿಗ್ನಲ್‍ನಲ್ಲಿ ಶಬ್ಧ ಜೋರಾಗುತ್ತದೆ. ರೈಲು ಸಂಪೂರ್ಣವಾಗಿ ಲೆವೆಲ್ ಕ್ರಾಸಿಂಗ್ ದಾಟಿದ ಮೇಲೆ ಹೂಟರ್ಸ್ ತಾನಾಗಿಯೇ ನಿಲ್ಲುತ್ತದೆ.
Advertisement
ಯೋಜನೆ ಪ್ರಕಾರ ಮುಂದಿನ ದಿನಗಳಲ್ಲಿ ಉಳಿದ ರೈಲುಗಳು ಸಂಚರಿಸುವ ಮಾರ್ಗಗಳಲ್ಲಿ ಹೂಟರ್ಸ್ ಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಜನರನ್ನು ಎಚ್ಚರಿಸುವುದು ಮಾತ್ರವಲ್ಲದೇ ಉಪಗ್ರಹ ಆಧಾರಿತ ಈ ವ್ಯವಸ್ಥೆ ರೈಲಿನ ಚಲನೆಯ ಮಾಹಿತಿಯನ್ನು ರಿಯಲ್ ಟೈಂನಲ್ಲಿ ತೋರಿಸುತ್ತದೆ.
ಪ್ರಸ್ತುತ ದೇಶದಲ್ಲಿ 9,340 ಮಾನವ ರಹಿತ ಲೆವೆಲ್ ಕ್ರಾಸಿಂಗ್ ಗಳು ಇದೆ ಎಂದು ರೈಲ್ವೇಯ ರಾಜ್ಯ ಸಚಿವ ಮನೋಜ್ ಸಿನ್ಹಾ ಎಂದು 2016ರ ಜುಲೈನಲ್ಲಿ ರಾಜ್ಯಸಭೆಗೆ ತಿಳಿಸಿದ್ದರು. ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರೈಲ್ವೇ ಅಪಘಾತಲ್ಲಿ ಮಾನವ ರಹಿತ ಕ್ರಾಸಿಂಗ್ ನಿಂದಾಗಿ ಶೇ.40 ರಷ್ಟು ಅಪಘಾತಗಳು ಆಗುತ್ತಿದೆ.
2014-15ರಲ್ಲಿ 1,148, 2015-16ರಲ್ಲಿ 1,253 ಮಾನವ ರಹಿತ ಕ್ರಾಸಿಂಗ್ ತೆಗೆಯಲಾಗಿತ್ತು. ಮುಂದಿನ 2-3 ವರ್ಷದಲ್ಲಿ ಸಂಪೂರ್ಣವಾಗಿ ಎಲ್ಲ ಮಾನವ ರಹಿತ ಲೆವೆಲ್ ಕ್ರಾಸಿಂಗ್ ತೆಗೆಯಲು ಸಚಿವಾಲಯ ಗುರಿಯನ್ನು ಹಾಕಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!