ನವದೆಹಲಿ: ಚಂದ್ರಯಾನ-3, ಸೂರ್ಯಯಾನ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), 2024 ರಲ್ಲೂ ಅದೇ ಹಾದಿಯಲ್ಲಿ ಮುಂದುವರಿಯಲು ಸಜ್ಜಾಗಿದೆ. ಹೊಸ ವರ್ಷದ ಮೊದಲ ದಿನ (ಜ.1) PSLV-C58 ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat) ಉಡಾವಣೆಗೆ ಸಜ್ಜಾಗಿದೆ.
ನಾಳೆ ಬೆಳಗ್ಗೆ 9:10 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಆಗಲಿದೆ. ಇಸ್ರೋ ಮಿಷನ್ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ನಾಸಾ-ಇಸ್ರೋ ಸಜ್ಜು: ಮುಂದಿನ ವರ್ಷ ‘NISAR’ ಉಪಗ್ರಹ ಉಡಾವಣೆ – ಏನಿದು ನಿಸಾರ್?
Advertisement
Advertisement
ಆಕಾಶ ಮೂಲಗಳಿಂದ ಕ್ಷಕಿರಣ ಹೊರಸೂಸುವಿಕೆಯ ಬಾಹ್ಯಾಕಾಶ-ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಸಂಶೋಧನೆ ಕೈಗೊಳ್ಳಲು ಇಸ್ರೋ ಮೊದಲ XPoSat ವೈಜ್ಞಾನಿಕ ಉಪಗ್ರಹ ಇದಾಗಿದೆ. ಇದು ಎರಡು ಪೇಲೋಡ್‌ಗಳನ್ನು ಒಯ್ಯುತ್ತದೆ.
Advertisement
POLIX (ಎಕ್ಸ್-ರೇಗಳಲ್ಲಿ ಪೋಲಾರಿಮೀಟರ್ ಉಪಕರಣ) ಮತ್ತು XSPECT (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್‌ಗಳಾಗಿವೆ. POLIX ಅನ್ನು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ. ಎಕ್ಸ್‌ಸ್ಪೆಕ್ಟ್ ಅನ್ನು ಬೆಂಗಳೂರಿನ ಯುಆರ್‌ಎಸ್‌ಸಿಯ ಬಾಹ್ಯಾಕಾಶ ಖಗೋಳವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ
Advertisement
ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ಅಭಿವೃದ್ಧಿಪಡಿಸಿದ 10 ಪೇಲೋಡ್‌ಗಳನ್ನು ಪಿಎಸ್‌ಎಲ್‌ವಿ ಉಡಾವಣೆ ಮಾಡಲಿದೆ.