ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಮುಂಜಾನೆ ಭೂ ವೀಕ್ಷಣಾ ಉಪಗ್ರಹ ಸಿ52 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 5:59ಕ್ಕೆ ಸರಿಯಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ) ರಾಕೆಟ್ ಮೂಲಕ ಉಪಗ್ರಹವನ್ನು ಹಾರಿಸಲಾಗಿದೆ. EOS-04 ಜೊತೆ 2 ಸಣ್ಣ ಉಪಗ್ರಹವನ್ನು ರಾಕೆಟ್ ಕಕ್ಷೆಗೆ ಕೊಂಡೊಯ್ದಿದೆ. ಇದು 2022ರ ಇಸ್ರೋವಿನ ಮೊದಲ ಕಾರ್ಯಾಚರಣೆಯಾಗಿದೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್
Advertisement
Advertisement
EOS-04 ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು ಕೃಷಿ, ಅರಣ್ಯ, ತೋಟಗಳು, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಶನ್‌ಗಳಿಗೆ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯುವಂತೆ ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ
Advertisement
EOS-04 ಉಪಗ್ರಹದೊಂದಿಗೆ ಎರಡು ಚಿಕ್ಕ ಉಪಗ್ರಹಗಳನ್ನು ಉಡಾಯಿಸಿದ್ದು, ಇದನ್ನು ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. INSPIREsat-1 ಎಂದು ಕರೆಯಲಾಗುವ ಉಪಗ್ರಹ 8.1 ಕೆಜಿ ತೂಕವಿದೆ. ಇದು ಸೂರ್ಯನ ಶಾಖದ ಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಲಿದ್ದು, ಇದರ ಜೀವಿತಾವಧಿ 1 ವರ್ಷ ಇರಲಿದೆ.