ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಾಹ್ಯಾಕಾಶದಲ್ಲಿ ಹೊಸತೊಂದು ಇತಿಹಾಸ ನಿರ್ಮಾಣ ಮಾಡಿದೆ. ಅಂತರಿಕ್ಷದಲ್ಲಿ ನಿರುಪಯುಕ್ತವಾಗಿದ್ದ ಉಪಗ್ರಹವನ್ನು (Satellite) ನಿಯಂತ್ರಿತ ವಿಧಾನದ ಮೂಲಕ ಭೂ ವಾತಾವರಣಕ್ಕೆ ತಂದು ಪೆಸಿಫಿಕ್ ಮಹಾಸಾಗರದಲ್ಲಿ (Pacefic Ocean) ಯಾರಿಗೂ ತೊಂದರೇ ಆಗದ ರೀತಿ ಬೀಳಿಸಿ ಸಾಧನೆ ಮಾಡಿದೆ.
ವಾಸ್ತವದಲ್ಲಿ ಅಂತರಿಕ್ಷದಲ್ಲೇ ಉಪಗ್ರಹವನ್ನು ಉಡಾಯಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಆದರೆ ಹಾಗೆ ಮಾಡಿದಲ್ಲಿ ಉಪಗ್ರಹದ ಅವಶೇಷಗಳು ಭವಿಷ್ಯದಲ್ಲಿ ಜಗತ್ತಿಗೆ ಕಂಟಕವಾಗುವ ಸಾಧ್ಯತೆ ಇತ್ತು. ಹೀಗಾಗಿ ಅವಧಿ ಮೀರಿದ ಒಂದು ಉಪಗ್ರಹವನ್ನು ಪೂರ್ಣ ಪ್ರಮಾಣದ ನಿಯಂತ್ರಿತ ವಿಧಾನದ ಮೂಲಕ ಸಮುದ್ರಕ್ಕೆ ಬೀಳುವಂತೆ ಮಾಡುವ ಸವಾಲಿನ ಕೆಲಸಕ್ಕೆ ಇಸ್ರೋ ಮುಂದಾಗಿತ್ತು.
ಮಂಗಳವಾರ ಸಂಜೆ 4:30ಕ್ಕೆ ಶುರುವಾದ ಪ್ರಕ್ರಿಯೆ ಸಂಜೆ 7:30ರವರೆಗೆ ನಡೆಯಿತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಆಪರೇಷನ್ ಕೊನೆಗೂ ಯಶಸ್ವಿಯಾಗಿದೆ. ನಿರ್ದೇಶಿತ ಮಾರ್ಗದಲ್ಲೇ ಭೂವಾತಾವರಣ ತಲುಪಿದ ಉಪಗ್ರಹ ನಿರ್ದೇಶಿತ ಪ್ರದೇಶದಲ್ಲೇ ಪತನವಾಗಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ವಿಮಾನ ಅಪಘಾತ- ಭಾರತೀಯ ಮೂಲದ ಮಹಿಳೆ ಸಾವು, ಮಗಳು ಗಂಭೀರ
ಅದೃಷ್ಟವಶಾತ್ ಉಪಗ್ರಹ ಕೊನೆಯವರೆಗೂ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಇಸ್ರೋ ಬರೋಬ್ಬರಿ 135 ಕೆಜಿ ತೂಕದ ಉಪಗ್ರಹವನ್ನು ಪೆಸಿಫಿಕ್ ಮಹಾಸಾಗರದ ನಿರ್ಜನ ಪ್ರಾಂತ್ಯದಲ್ಲಿ ಕೆಡವಿದೆ.
The controlled re-entry experiment for the decommissioned Megha-Tropiques-1 (MT-1) was carried out successfully on March 7, 2023.
The satellite has re-entered the Earth’s atmosphere and would have disintegrated over the Pacific Ocean. pic.twitter.com/UIAcMjXfAH
— ISRO (@isro) March 7, 2023
2011ರಲ್ಲಿ ಫ್ರಾನ್ಸ್ ಜೊತೆಗೂಡಿ ಇಸ್ರೋ ಸಂಸ್ಥೆ ಎಂಐ1 ಉಪಗ್ರಹವನ್ನು ಉಡಾವಣೆ ಮಾಡಿತ್ತು. ಉಷ್ಣಮಂಡಲ ವಾತಾವರಣದ ಬಗ್ಗೆ ಅಧ್ಯಯನ ನಡೆಸಿದ್ದ Megha-Tropiques ಉಪಗ್ರಹ ಮೂರು ವರ್ಷಕ್ಕೆ ತನ್ನಕಾರ್ಯ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ 2021ರವರೆಗೂ ಎಂಐಟಿ ನಿರಂತರ ಸೇವೆ ನೀಡಿತ್ತು. ಇದನ್ನು ಸುರಕ್ಷಿತವಾಗಿ ಕೆಡವಲು ಇಸ್ರೋ 2022ರ ಆಗಸ್ಟ್‌ನಿಂದಲೇ `ಆಪರೇಷನ್ ಮೇಘಾ’ ಕೈಗೊಂಡಿತ್ತು.