ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಬಾಹ್ಯಾಕಾಶದಲ್ಲಿ 2ನೇ ಬಾರಿಗೆ ಉಪಗ್ರಹ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದರ್ ಸಿಂಗ್ (Jitendra Singh) ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಾಹ್ಯಾಕಾಶದಲ್ಲಿ ಉಪಗ್ರಹಗಳ ಎರಡನೇ ಡಾಕಿಂಗ್ (Docking) ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಸನಿಹಕ್ಕೆ – ಹೊಸ ದಾಖಲೆ ಬರೆದ ಗೋಲ್ಡ್
#ISRO SPADEX Update:
Glad to inform that the second docking of satellites has been accomplished successfully.
As informed earlier, the PSLV-C60 / SPADEX mission was successfully launched on 30 December 2024. Thereafter the satellites were successfully docked for the first time…
— Dr Jitendra Singh (@DrJitendraSingh) April 21, 2025
2024ರ ಡಿಸೆಂಬರ್ 30ರಂದು ಸ್ಪೇಡೆಕ್ಸ್ (Spadex) ಮಿಷನ್‌ನ PSLV-C60 ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ನಂತರ 2025 ಜನವರಿ 16ರಂದು ಬೆಳಗ್ಗೆ 6:20ಕ್ಕೆ ಮೊದಲ ಬಾರಿಗೆ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಗಿತ್ತು. ಮಾರ್ಚ್ 13ರ ಬೆಳಗ್ಗೆ 9:20ಕ್ಕೆ ಅನ್‌ಡಾಕ್ ಮಾಡಲಾಗಿತ್ತು. ಮುಂದಿನ 2 ವಾರಗಳಲ್ಲಿ ಮತ್ತಷ್ಟು ಪ್ರಯೋಗದ ಪ್ಲ್ಯಾನ್ ಇರುವುದಾಗಿ ತಿಳಿಸಿದ್ದಾರೆ.
ಅಮೆರಿಕ, ರಷ್ಯಾ, ಚೀನಾ ಬಳಿಕ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ಪೂರ್ಣಗೊಳಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ.ಇದನ್ನೂ ಓದಿ: 6 ವರ್ಷದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ