ನವದೆಹಲಿ: ಶ್ರೀಹರಿಕೋಟಾದಲ್ಲಿ (Sriharikota) ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ (Countdown) ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ (Scientist) ವಲರ್ಮತಿ (Valarmathi) ಅವರು ಹೃದಯಾಘಾತದಿಂದ (Heart Attack) ಭಾನುವಾರ ನಿಧನರಾಗಿದ್ದಾರೆ.
ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಇವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು. ಇದನ್ನೂ ಓದಿ: ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್
Advertisement
The voice of Valarmathi Madam will not be there for the countdowns of future missions of ISRO from Sriharikotta. Chandrayan 3 was her final countdown announcement. An unexpected demise . Feel so sad.Pranams! pic.twitter.com/T9cMQkLU6J
— Dr. P V Venkitakrishnan (@DrPVVenkitakri1) September 3, 2023
Advertisement
ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕೌಂಟ್‌ಡೌನ್ ಘೋಷಣೆಯಾಗಿತ್ತು. ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಹುಪತ್ನಿತ್ವ ನಿಷೇಧ – ಮಸೂದೆ ಮಂಡನೆಗೆ ಮುಂದಾದ ಅಸ್ಸಾಂ ಸರ್ಕಾರ
Advertisement
Advertisement
ವಲರ್ಮತಿ ಯಾರು?
ವಲರ್ಮತಿ ಆರ್‌ಐಎಸ್‌ಎಟಿ-1ರ ಪಾಜೆಕ್ಟ್ ಡೈರೆಕ್ಟರ್ ಆಗಿದ್ದು, 2015ರಲ್ಲಿ ಸರ್ಕಾರ ನೀಡಿದ ಅಬ್ದುಲ್ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದರು. ವಲರ್ಮತಿ 1984ರಲ್ಲಿ ಇಸ್ರೋಗೆ ಸೇರಿದ್ದು, ಇನ್ಸಾಟ್ 2ಎ, ಐಆರ್‌ಎಸ್, ಐಸಿ, ಐಡಿ, ಟಿಇಎಸ್ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ
Web Stories