ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಯೊಬ್ಬರನ್ನು ಅಪಾರ್ಟ್ ಮೆಂಟಿನಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
56 ವರ್ಷದ ಎಸ್ ಸುರೇಶ್ ದುಷ್ಕರ್ಮಿಗಳಿಂದ ಹತ್ಯೆಯಾದ ದುರ್ದೈವಿ ವಿಜ್ಞಾನಿ. ಇವರ ಮೃತದೇಹ ಹೈದರಾಬಾದಿನ ಅಮೀರ್ ಪೇಟ್ ನಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮೂಲತಃ ಕೇರಳದವರಾಗಿರುವ ಸುರೇಶ್, ಹೈದರಾಬಾದಿನ ಅಪಾರ್ಟ್ ಮೆಂಟ್ ಒಂದರಲ್ಲಿ ಒಬ್ಬರೇ ನೆಲೆಸಿದ್ದರು. ಮಂಗಳವಾರ ಸುರೇಶ್ ಕಚೇರಿಗೆ ಬಂದಿರಲಿಲ್ಲ. ಹೀಗಾಗಿ ಅವರ ಸಹೋದ್ಯೋಗಿಗಳು ಸುರೇಶ್ ಮೊಬೈಲಿಗೆ ಕರೆ ಮಾಡಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಸಹೋದ್ಯೋಗಿಗಳು ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಸುರೇಶ್ ಪತ್ನಿ ಇಂದಿರಾಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಸುರೇಶ್ ಸಂಬಂಧಿಕರೊಬ್ಬರು ಇದೇ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರು ಕೂಡ ಸುರೇಶ್ ಪತ್ನಿಗೆ ವಿಷಯ ತಿಳಿಸುವ ಮೊದಲು ಒಂದು ಬಾರಿ ಪರಿಶೀಲಿಸಿದ್ದಾರೆ. ಈ ಮಧ್ಯೆ ಸುರೇಶ್ ಪತ್ನಿ ಪೊಲೀಸರೊಂದಿಗೆ ಹೈದರಾಬಾದ್‍ಗೆ ದೌಡಾಯಿಸಿದ್ದಾರೆ. ಅಲ್ಲದೆ ಮನೆ ಬಾಗಿಲು ಒಡೆದು ಒಳಹೋದಾಗ ಇಂದಿರಾಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸುರೇಶ್ ಮನೆಯೊಳಗೆ ಹೆಣವಾಗಿ ಬಿದ್ದಿದ್ದರು.
Advertisement
ಸುರೇಶ್ ತಲೆಯಲ್ಲಿ ಗಾಯಗಳಾಗಿತ್ತು. ಹೀಗಾಗಿ ಭಾರದ ವಸ್ತುಗಳಿಂದ ತಲೆಗೆ ಹೊಡೆದಿರಬಹುದು. ಪರಿಣಾಮ ಸುರೇಶ್ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇತ್ತ ಫ್ಲ್ಯಾಟ್ ನಲ್ಲಿರುವು ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲಿಸಲಾಗುವುದು. ಅಲ್ಲದೆ ಒತ್ತಾಯಪೂರ್ವಕವಾಗಿ ಯಾರಾದರೂ ಫ್ಲ್ಯಾಟ್ ಒಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾರಾ ಎನ್ನುವ ಕುರಿತು ಕೂಡ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Hyderabad Police: SR Suresh Kumar, who was working as a scientist at National Remote Sensing Centre (NRSC) of ISRO, found dead at his residence in Ameerpet. Body shifted to Osmania hospital for post mortem. Investigation is underway pic.twitter.com/EZFvSHM8JR
— ANI (@ANI) October 2, 2019