EOS-09 ಉಪಗ್ರಹ ಉಡಾವಣೆ ವಿಫಲ – ನಿರ್ದಿಷ್ಟ ಕಕ್ಷೆ ಸೇರುವಲ್ಲಿ ಫೇಲ್

Public TV
2 Min Read
Isro EOS 09 Falied
ಅಮರಾವತಿ: ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.

ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5:59ರ ಸುಮಾರಿಗೆ ಶ್ರೀಹರಿಕೋಟಾದ (Sriharikota) ಸತೀಶ್ ಧವನ್ ಉಡಾವಣಾ ಕೇಂದ್ರದಿಂದ (Satish Dhawan Space Centre) EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ ಹಂತದ ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.ಇದನ್ನೂ ಓದಿ: ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ (V Narayanan) ಮಾಹಿತಿ ನೀಡಿದ್ದು, ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿರುವ (Bengaluru) ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

ಉಪಗ್ರಹದ ವಿಶೇಷತೆ ಏನು?
ಸಾಧಾರಣವಾಗಿ ಮೋಡಗಳು, ಬಿರುಗಾಳಿ, ರಾತ್ರಿಯ ವೇಳೆ ಹೆಚ್ಚಿನ ಉಪಗ್ರಹಗಳಿಗೆ ಸರಿಯಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ಉಪಗ್ರಹ ಮೋಡಗಳು, ಮಳೆ, ಮಂಜು ಸೇರಿದಂತೆ ಎಲ್ಲಾ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ಸ್ಷಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯವ ಸಾಮರ್ಥ್ಯ ಹೊಂದಿತ್ತು.

ಇಔS-09 ನಲ್ಲಿರುವ Synthetic Aperture Radar ಎಷ್ಟು ಶಕ್ತಿಶಾಲಿ ಎಂದರೆ ಭೂಪ್ರದೇಶ, ಸಸ್ಯಗಳು ಮತ್ತು ಮಾನವ ನಿರ್ಮಿತ ಡೇರೆಗಳನ್ನು ಸಹ ವರ್ಗೀಕರಣ ಮಾಡಿ ಫಲಿತಾಂಶ ನೀಡುವ ಗುರಿ ಹೊಂದಿತ್ತು. ಹೀಗಾಗಿ ಇನ್ನು ಮುಂದೆ ಗಡಿಯಲ್ಲಿ ಯಾವುದೇ ಸಮಯದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದರೂ ಅದರ ಸಂಪೂರ್ಣ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿತ್ತು.

10 ರಿಂದ 225 ಕಿಮೀ ವರೆಗಿನ ವಿಶಾಲವಾದ ಜಾಗಗಳನ್ನು ಸ್ಕ್ಯಾನ್ ಹಾಗೂ ದೊಡ್ಡ ಪ್ರಮಾಣದ ವಿಪತ್ತು ನಡೆದಾಗ ಅಂದರೆ ಪ್ರವಾಹ, ಚಂಡಮಾರುತಗಳು, ಭೂಕುಸಿತ ನಡೆದಾಗ ಅದರ ನೈಜ ಚಿತ್ರಣವನ್ನು ವೀಕ್ಷಿಸಬಹುದಾಗಿತ್ತು.

ಈ ಉಪಗ್ರಹ ಗಡಿಯನ್ನು ಕಾಯುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಅಕ್ರಮ ಸಮುದ್ರ ಚಟುವಟಿಕೆಯನ್ನು ಮೇಲ್ವಿಚಾರಣೆ, ತೈಲ ಸೋರಿಕೆಗಳನ್ನು ಪತ್ತೆ, ಭಾರತದ 7,500 ಕಿಮೀ ಉದ್ದದ ಕರಾವಳಿಯಲ್ಲಿ ಹಡಗುಗಳನ್ನು ಪತ್ತೆ ಹಚ್ಚುವ ಪ್ರಮುಖ ಕಾರ್ಯನಿರ್ವಹಿಸುವ ಗುಣ ಹೊಂದಿತ್ತು.ಇದನ್ನೂ ಓದಿ: ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

Share This Article