ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಭಾನುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾಥಮಿಕ ಉಪಗ್ರಹ ಡಿಎಸ್-ಎಸ್ಎಆರ್, 6 ಸಹ-ಪ್ರಯಾಣಿಕ ಉಪಗ್ರಹಗಳು ಸೇರಿದಂತೆ 7 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ 56 ರಾಕೆಟ್ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಂದು ಬೆಳಗ್ಗೆ 6:30ಕ್ಕೆ ಉಡಾವಣೆ ಮಾಡಲಾಯಿತು. ಎಲ್ಲ ಏಳು ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ 56 ರಾಕೆಟ್ ನಿಖರವಾಗಿ ಅವುಗಳ ಕಕ್ಷೆಗೆ ಸೇರಿಸಿದೆ. ಇದನ್ನೂ ಓದಿ: Instagram ಪ್ರಿಯಕರನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16ರ ಹುಡುಗಿ ಅರೆಸ್ಟ್
Advertisement
Advertisement
ಡಿಎಸ್-ಎಸ್ಎಆರ್ ಮತ್ತು ಉಳಿದ 6 ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದವಾಗಿವೆ. ಸಿಂಗಾಪುರದ ಎಸ್ಟಿ ಇಂಜಿನಿಯರಿಂಗ್ ಸಂಸ್ಥೆಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಕಾರ್ಯಾಚರಣೆ ನಡೆಸಿದೆ.
Advertisement
ಡಿಎಸ್-ಎಸ್ಎಆರ್ ಉಪಗ್ರಹವನ್ನು ಡಿಎಸ್ಟಿಎ (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ಎಸ್ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಮನೆಗೆ ತೆರಳಿದ್ದ ಯೋಧನ ಕಿಡ್ನ್ಯಾಪ್ – ಸೇನೆಯಿಂದ ತೀವ್ರ ಹುಡುಕಾಟ
Advertisement
ಡಿಎಸ್-ಎಸ್ಎಆರ್ ಎಲ್ಲಾ ಹವಾಗುಣದಲ್ಲಿ ಹಗಲು-ರಾತ್ರಿ ಸೇವೆ ಒದಗಿಸುತ್ತದೆ. ಪೂರ್ಣ ಧ್ರುವೀಯತೆಯಲ್ಲಿ 1m-ರೆಸಲ್ಯೂಶನ್ನಲ್ಲಿ ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
Web Stories